ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ : ರಾಜ್ಯ ಸರಕಾರ ಆದೇಶ

ಸಾಂದರ್ಭಿಕ ಚಿತ್ರ | Photo Credit : freepik
ಬೆಂಗಳೂರು : ಮದ್ಯ ಮತ್ತು ಬಿಯರ್ ಉತ್ಪನ್ನಗಳಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಅಬಕಾರಿ ಇಲಾಖೆ ಆಯುಕ್ತರು ಪ್ರಕಟಣೆ ನೀಡಿದ್ದು, ರಾಜ್ಯ ಸರಕಾರ 2026-27ನೆ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ಹಾಕಿದೆ. ಇದರಿಂದ ಹಲವು ಮದ್ಯದ ದರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೆಲ ಬ್ರ್ಯಾಂಡ್ಗಳ ಮದ್ಯದ ದರ ಹೆಚ್ಚಳ, ಇನ್ನೂ ಕೆಲವು ದರ ಇಳಿಕೆಯಾಗಿದೆ.
ಹೊಸ ಅಬಕಾರಿ ತೆರಿಗೆ ನೀತಿಯ ಭಾರವು ದೇಶಿ ತಯಾರಿತ ಮದ್ಯದ ಮೊದಲ 8 ಅಬಕಾರಿ ಸ್ಲ್ಯಾಬ್ಗಳ (ಕಡಿಮೆ ದರದ) ಮೇಲೆ ಹೆಚ್ಚು ಬೀಳಲಿದೆ. ಇವು 180 ಮಿ.ಲೀ (ನಿಪ್) ಟೆಟ್ರಾ ಪ್ಯಾಕ್ಗಳಲ್ಲಿ ಮಾರಾಟ ಆಗುತ್ತವೆ. ಈ ಸ್ಲ್ಯಾಬ್ಗಳ ದರಗಳು ಶೇ.20-25ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ.
Next Story




