ರಾಜ್ಯದ ಹಣ ಪಂಚ ರಾಜ್ಯಗಳ ಚುನಾವಣೆಗೆ ಬಳಕೆ ಆರೋಪ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಅ. 13: ‘ರಾಜ್ಯದ ಹಣವನ್ನು ಪಂಚರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಾರೆಂಬ ಶಾಸಕ ಮುನಿರತ್ನ ಆರೋಪ ಸುಳ್ಳು, ಅದನ್ನು ಅವರು ನೋಡಿದ್ದಾರಾ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮುನಿರತ್ನ ಮಾಡಿರುವ ಈ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನೀನು ನೋಡಿದ್ದೀಯಾ? ಅವರು ನೋಡಿದ್ದಾರಾ?. ಆರೋಪ ಮಾಡೋಕೆ ಏನು?. ಎಲ್ಲ ಆರೋಪಗಳು ಸುಳ್ಳುಗಳಿಂದ ಕೂಡಿವೆ. ಬಿಜೆಪಿ ಶಾಸಕರ ಆರೋಪಗಳು ನಿಜವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
Next Story





