ʼವಾರ್ತಾಭಾರತಿʼ ಹಿರಿಯ ವರದಿಗಾರ ಅಮ್ಜದ್ ಖಾನ್ ಸೇರಿದಂತೆ 27 ಮಂದಿಗೆ ‘ಮಾಧ್ಯಮ ಸೇವಾ ರತ್ನ ಪ್ರಶಸ್ತಿ’

ಅಮ್ಜದ್ ಖಾನ್
ಬೆಂಗಳೂರು : ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಪ್ರತಿವರ್ಷ ಕೊಡಮಾಡುವ 2026ನೇ ಸಾಲಿನ ‘ಮಾಧ್ಯಮ ಸೇವಾ ರತ್ನ ಪ್ರಶಸ್ತಿ’ಗೆ ʼವಾರ್ತಾಭಾರತಿʼ ಪತ್ರಿಕೆ ಬೆಂಗಳೂರು ಆವೃತ್ತಿಯ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ. ಅವರು ಸೇರಿದಂತೆ 27 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್. ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರು, ಪತ್ರಕರ್ತರು ಹಾಗೂ ಕಾರ್ಗಿಲ್ ಯುದ್ಧದ ವೀರ ಯೋಧರ ಸೇವೆಯನ್ನು ಸ್ಮರಿಸುವ ಉದ್ದೇಶದೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ ಎಂದು ಹೇಳಿದರು.
ಜು.26ರಂದು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಗಿಲ್ ವಿಜಯ್ ದಿವಸ್ 23ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ವಕೀಲೆ ಪ್ರಮೀಳಾ ನೇಸರ್ಗಿ, ಪತ್ರಕರ್ತರಾದ ನಂಜುಂಡಪ್ಪ ವಿ., ಗಂಡಸಿ ಸದಾನಂದಸ್ವಾಮಿ, ಕಿರಣ್ ಸೂರ್ಯ, ಸುಬೇಧಾರ್ ಡಾ.ಕುಮಾರ್ ಸ್ವಾಮಿ, ಕ್ಷೀರಜ ಹಿರಿಯ ನಾಗರಿಕ ಮಹಿಳಾ ಸಮಾಜದ ಸುನೀತ ನಾಗೇಶ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರು: ಪತ್ರಕರ್ತರಾದ ಅಬ್ದುಲ್ ಹಲೀಮ್ ಮನ್ಸೂರ್, ಶರಣಯ್ಯ ಬಿ.ಒಡೆಯರ್, ಶಿವರಾಜ್ ಮೌರ್ಯ, ಶಿವಕುಮಾರ್ ಬೆನ್ನೂರು, ನಿಂಗಪ್ಪ ಗುದಿಗೇರ, ಗಿರೀಶ್ ಕೆ.ಆರ್., ವೆಂಕಟೇಶ ಸ್ವಾಮಿ, ಮುರಳಿ ಜಿ., ಸಿದ್ದನಗೌಡ ಎಚ್.ಪಾಟೀಲ್, ಅಮರೇಶ ಬಿ.ಕಲ್ಲೂರ, ವಿಜಯ್ಕುಮಾರ್ ವಿ, ರಾಘವೇಂದ್ರ ಅಡಿಗ ಎಚ್.ಎಸ್., ಚಂದ್ರಶೇಖರ್ ಜಿ., ಡಾ.ಪರ್ವಿಝ್ ಪಾಷಾ, ಟಿ.ಎಸ್.ಕೃಷ್ಣಮೂರ್ತಿ, ದರ್ಶನ್ ಹುಣಸೂರು, ನಟರಾಜ್ ಬಿ.ಪಿ, ಮೋಹನ್ ಕುಮಾರ್ ಎ.ವಿ, ವೆಂಕಟೇಶ್ ಪೈ, ಸೈಯದ್ ಅಸದುಲ್ಲಾ, ಮಲ್ಲಿಕಾರ್ಜುನ್, ಸತೀಶ್ ಕೃಷ್ಣ, ಸುಬೇಧಾರ್ ಶಾಂತಶೀಲನ್ ಎಂ., ಲೇಡಿ ಮಾಸ್ಟರ್ ಜಿ.ಸಾಯಿಪ್ರಭ, ಕಿರಣ್ ಪ್ರಸಾದ ಜೆ., ಧನ್ವೀರ್ ಕೆ.ಭಟ್ ಅವರನ್ನು ‘ಮಾಧ್ಯಮ ಸೇವಾ ರತ್ನಪ್ರಶಸ್ತಿ’ಗೆ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಚಂದ್ರಿಕಾ ಬಿ.ವಿ., ಎಚ್.ಎ.ನಾಗರತ್ನಮ್ಮ, ಕೆ.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






