Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ವಾರ್ತಾಭಾರತಿ ಧ್ವನಿ ಇಲ್ಲದವರ ಧ್ವನಿ,...

ವಾರ್ತಾಭಾರತಿ ಧ್ವನಿ ಇಲ್ಲದವರ ಧ್ವನಿ, ಸತ್ಯ ಹೇಳುವ ಪತ್ರಿಕೆ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿಗಳಿಂದ ವಾರ್ತಾಭಾರತಿಯ 22ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ, globalkannadiga.com ಲೋಕಾರ್ಪಣೆ

ವಾರ್ತಾಭಾರತಿವಾರ್ತಾಭಾರತಿ24 Dec 2024 1:36 PM IST
share
ವಾರ್ತಾಭಾರತಿ ಧ್ವನಿ ಇಲ್ಲದವರ ಧ್ವನಿ, ಸತ್ಯ ಹೇಳುವ ಪತ್ರಿಕೆ: ಸಿಎಂ ಸಿದ್ದರಾಮಯ್ಯ

►'ನಿಜದ ಸೂಜಿಮೊನೆ' ಕೃತಿ ಹಾಗೂ ಸಂಪಾದಕೀಯಗಳ ಸಂಗ್ರಹ ಬಿಡುಗಡೆ

ಬೆಂಗಳೂರು: ವಾರ್ತಾಭಾರತಿಯು ಜನರಿಗೆ ಸತ್ಯ ತಿಳಿಸುವ, ಧ್ವನಿ ಇಲ್ಲದವರ ಧ್ವನಿಯಾಗಿದೆ. 22 ವರ್ಷಗಳಲ್ಲಿ ವಾರ್ತಾಭಾರತಿ ಬಹಳಷ್ಟು ಬೆಳೆದಿದೆ. ನಾಡಿನ ಜನತೆಗೆ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ನಾನು ತಪ್ಪದೇ ವಾರ್ತಾಭಾರತಿ ಓದುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಾರ್ತಾಭಾರತಿ ಕನ್ನಡ ದೈನಿಕದ 22ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿ ಓದುಗರ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಅಂಬಿಕಾ ಮಂಡ್ಯ ಹಾಗೂ ಮಂಜುನಾಥ್ ಕೊಪ್ಪಳ ಅವರಿಗೆ ಸಿಎಂ ಸಿದ್ದರಾಮಯ್ಯ ವಿಶೇಷಾಂಕದ ಮೊದಲ ಪ್ರತಿಗಳನ್ನು ವಿತರಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾಭಾರತಿಯ 22ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಮತ್ತು ಅನಿವಾಸಿ ಕನ್ನಡಿಗರಿಗಾಗಿ ರೂಪಿಸಿದ ʼglobalkannadiga.comʼ ಹೊಸ ಜಾಲತಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಅಂಕಣ 'ಅನುಗಾಲ'ದ ಸಂಗ್ರಹ 'ನಿಜದ ಸೂಜಿಮೊನೆ' ಕೃತಿಯನ್ನು ಕೂಡ ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಸಂತೋಷದಿಂದ ವಾರ್ತಾಭಾರತಿಯ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿದ್ದೇನೆ. globalkannadiga.com ವೆಬ್ ಸೈಟ್ ಕೂಡಾ ಲೋಕಾರ್ಪಣೆ ಆಗಿದೆ. ವಾರ್ತಾಭಾರತಿಯು ಜನರಿಗೆ ಸತ್ಯ ತಿಳಿಸುವ, ಧ್ವನಿ ಇಲ್ಲದವರ ಧ್ವನಿಯಾಗಿದೆ. 22 ವರ್ಷಗಳಲ್ಲಿ ವಾರ್ತಾಭಾರತಿ ಬಹಳಷ್ಟು ಬೆಳೆದಿದೆ. ನಾಡಿನ ಜನತೆಗೆ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ನಾನು ತಪ್ಪದೇ ವಾರ್ತಾಭಾರತಿ ಓದುತ್ತೇನೆ. ಅದರಲ್ಲಿ ಬರುವ ವಿಶೇಷ ಲೇಖನಗಳು, ಸಮಾಜದ ಸಮಸ್ಯೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಪರವಾಗಿದೆಯೋ ಇಲ್ಲವೋ ಎಂಬುವುದನ್ನು ತಿಳಿಸುತ್ತದೆ" ಎಂದರು.

"ಪತ್ರಿಕೆ ಸತ್ಯ ಹಾಗೂ ವಸ್ತು ನಿಷ್ಠವಾಗಿ ಇರಬೇಕು. ಸಮಾಜದಲ್ಲಿ ಕರ್ಮ ಸಿದ್ಧಾಂತ ಇದೆ. ಅದನ್ನು ನಿವಾರಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇತ್ತು. ಶಿಕ್ಷಣದಿಂದ ವಂಚಿತರಾದ ಬಹುಸಂಖ್ಯಾತರು ಇದ್ದರು. ಅವರ ಧ್ವನಿಯಾಗಿ ವಾರ್ತಾಭಾರತಿ ಕೆಲಸ ಮಾಡುತ್ತಿದೆ. ಇನ್ನೂ ಜನಪರ ಹಾಗೂ ಸಮಾಜಪರವಾಗಿ ಕೆಲಸ ಮಾಡಿ. ಸಮ ಸಮಾಜ ನಿರ್ಮಾಣ ಇನ್ನೂ ಆಗಿಲ್ಲ. ನಾವು ಮನುಷ್ಯತ್ವ ಇರುವ ಸಮಾಜ ನಿರ್ಮಾಣ ಮಾಡಬೇಕು. ಮನುಷ್ಯರು ಪರಸ್ಪರ ಪ್ರೀತಿಸಬೇಕು. ದ್ವೇಷ ಮಾಡಬಾರದು. ಮಾಧ್ಯಮಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಲಿ" ಎಂದು ಸಿಎಂ ಹೇಳಿದರು.

ಅಂಕಣಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ ಎಂದು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಅಂಕಣ 'ಅನುಗಾಲ'ದ ಸಂಗ್ರಹ 'ನಿಜದ ಸೂಜಿಮೊನೆ' ಕೃತಿ ಕುರಿತು ಪ್ರತಿಕ್ರಿಯಿಸಿದರು.

ಸಂಪಾದಕೀಯ ಸಂಗ್ರಹವು ಉತ್ತಮವಾಗಿದೆ. ಸಂಪಾದಕೀಯ ವಸ್ತು ನಿಷ್ಠವಾಗಿರಬೇಕು. ಮಾಧ್ಯಮಗಳು ವಸ್ತು ನಿಷ್ಠವಾಗಿರದಿದ್ದರೆ ಕಷ್ಟವಾಗುತ್ತದೆ. ಸಂಪಾದಕೀಯಗಳು ಇನ್ನೂ ಪ್ರಖರವಾಗಿರಲಿ. ʼglobalkannadiga.comʼ ವೆಬ್ಸೈಟ್ ಎಲ್ಲಾ ಕನ್ನಡಿಗರಿಗೂ ತಲುಪಲಿ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿ ಎಂದು ಹಾರೈಸಿದರು.

ಇದೇ ವೇಳೆ ವಾರ್ತಾಭಾರತಿಯ ಸಂಪಾದಕೀಯಗಳ ಸಂಗ್ರಹವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬಿಡುಗಡೆ ಮಾಡಿದರು.

ಕರ್ನಾಟಕದ ಸಾಮಾಜಿಕ ಆರೋಗ್ಯ ಕಾಪಾಡುತ್ತಿರುವ ವಾರ್ತಾಭಾರತಿ: ನಟ ಪ್ರಕಾಶ್ ರಾಜ್

ಇವತ್ತಿನ ಕಾಲದಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದೆ. ವಾರ್ತಾಭಾರತಿಯ ಸಂಪಾದಕೀಯಗಳ ಸಂಗ್ರಹವನ್ನು ಬಿಡುಗಡೆ ಮಾಡುವುದು ನನಗೆ ಅತ್ಯಂತ ಸಂಸತದ ವಿಷಯ. ವಾರ್ತಾಭಾರತಿಯ ಸಂಪಾದಕೀಯಗಳನ್ನು ಓದುವುದೇ ಒಂದು ವಿಶೇಷ ಅನುಭವ. ವಾರ್ತಾಭಾರತಿಯು ರಾಜ್ಯದ ಸಾಮಾಜಿಕ ಆರೋಗ್ಯ ಕಾಪಾಡುತ್ತಿರುವ ಮಾದ್ಯಮ ಆಗಿದೆ. ಈ ಮಾಧ್ಯಮ ಇದೇ ರೀತಿ ನೇರ ನಿಷ್ಠುರವಾಗಿ ಮುಂದುವರೆಯಲಿ. ಜನರ ಪರವಾಗಿ ಕೆಲಸ ಮಾಡಲಿ ಎಂದು ನಟ ಪ್ರಕಾಶ್ ರಾಜ್ ಶುಭ ಹಾರೈಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವಾರ್ತಾಭಾರತಿ ಪತ್ರಿಕೆಯವರು ಅನಿವಾಸಿ ಕನ್ನಡಿಗರಿಗೆ ಜಗತ್ತಿನ ಎಲ್ಲ ಭಾಗಗಳ ಸುದ್ದಿಗಳನ್ನು ಕನ್ನಡದಲ್ಲಿ ಮುಟ್ಟಿಸಲು "ಗ್ಲೋಬಲ್ ಕನ್ನಡಿಗ" ಎಂಬ ವೆಬ್ ಸೈಟ್ ಅನ್ನು ಇವತ್ತು ಲೋಕಾರ್ಪಣೆ ಮಾಡಿದ್ದಾರೆ. ಅವರ ಬಳಗಕ್ಕೆ ನನ್ನ ಶುಭ ಹಾರೈಕೆಗಳು.

ಪ್ರಗತಿಪರ ಹಾಗೂ ತಾರ್ಕಿಕ ವಿಷಯಗಳನ್ನು ಮಂಡಿಸುವಲ್ಲಿ ವಾರ್ತಾಭಾರತಿ ಸದಾ ಮುಂಚೂಣಿಯಲ್ಲಿರುತ್ತದೆ. ಅಲ್ಲದೆ, ನೈಜ್ಯತೆಗೆ ಹತ್ತಿರವಾಗಿರುವಂತೆ ಸುದ್ದಿಗಳನ್ನು ನೀಡುವುದು ನಮ್ಮ ವಾರ್ತಾಭಾರತಿ. ವ್ಯಾಪಕವಾಗಿ ಬೆಳೆದಿರುವ ವಾರ್ತಾಭಾರತಿ, ಇಡೀ ರಾಜ್ಯ ದಲ್ಲಿ ಕನ್ನಡಿಗರ ಧ್ವನಿಯಾಗಿ ಬೆಳೆಯುತ್ತಿದೆ. ಇದೇ ರೀತಿ ವಿಶ್ವಮಟ್ಟದಲ್ಲಿ ಕನ್ನಡಿಗರಿಗೆ globalkannadiga.com ಮೂಲಕ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಶ್ಲಾಘನೀಯ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಶಾಸಕ ಶಿವಲಿಂಗೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ನಿರ್ದೇಶಕ ಯಾಸಿನ್ ಮಲ್ಪೆ ಉಪಸ್ಥಿತರಿದ್ದರು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X