Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. 7,506 ಕೋಟಿ ರೂ.ಹೂಡಿಕೆಯ 55 ಯೋಜನೆಗಳಿಗೆ...

7,506 ಕೋಟಿ ರೂ.ಹೂಡಿಕೆಯ 55 ಯೋಜನೆಗಳಿಗೆ ಒಪ್ಪಿಗೆ : ಸಚಿವ ಎಂ.ಬಿ.ಪಾಟೀಲ್

ವಾರ್ತಾಭಾರತಿವಾರ್ತಾಭಾರತಿ19 Jun 2026 8:18 PM IST
share
7,506 ಕೋಟಿ ರೂ.ಹೂಡಿಕೆಯ 55 ಯೋಜನೆಗಳಿಗೆ ಒಪ್ಪಿಗೆ : ಸಚಿವ ಎಂ.ಬಿ.ಪಾಟೀಲ್
‘28 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ’

ಬೆಂಗಳೂರು : ರಾಜ್ಯದಲ್ಲಿ ಒಟ್ಟು 7,506ಕೋಟಿ ರೂ.ಬಂಡವಾಳ ಹೂಡಿಕೆ ಮತ್ತು 28 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿರುವ 55 ಕೈಗಾರಿಕಾ ಯೋಜನೆಗಳಿಗೆ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆ ಪೈಕಿ 41 ಹೂಡಿಕೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ಸಭೆಯ ಬಳಿಕ ಮಾಹಿತಿ ನೀಡಿರುವ ಅವರು, ಇವುಗಳಲ್ಲಿ 4 ಯೋಜನೆಗಳು ವಿದೇಶಿ ನೇರ ಹೂಡಿಕೆಯ(ಎಫ್‍ಡಿಐ) ಯೋಜನೆಗಳಾಗಿವೆ. ತೈವಾನಿನ ಟೀಮಿಂಗ್ ಆಟೋಮೇಷನ್, ದಕ್ಷಿಣ ಕೊರಿಯಾದ ವೈಜೆ ಲಿಂಕ್, ಜರ್ಮನಿಯ ರೇವುಂ ಮತ್ತು ಜಪಾನ್ ಮೂಲದ ಶಿಂಕೋ ಕಂಪೆನಿಗಳು ಕ್ರಮವಾಗಿ 20ಕೋಟಿ ರೂ., 177.96ಕೋಟಿ ರೂ., 16.50ಕೋಟಿ ರೂ. ಮತ್ತು 100ಕೋಟಿ ರೂ.(ಒಟ್ಟು 314.46 ಕೋಟಿ ರೂ.) ಹೂಡಿಕೆ ಮಾಡುತ್ತಿವೆ. ಇವುಗಳಿಂದ ಒಟ್ಟು 503 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ಒಪ್ಪಿಗೆ ನೀಡಲಾಗಿರುವ ಹೂಡಿಕೆ ಪ್ರಸ್ತಾವನೆಗಳಲ್ಲಿ 50ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲಿರುವ ಯೋಜನೆಗಳ ಸಂಖ್ಯೆ 35ರಷ್ಟಿದೆ. ಹಾಗೆಯೇ 15 ಯೋಜನೆಗಳಿಂದ ತಲಾ 15ರಿಂದ 50 ಕೋಟಿ ರೂ.ಹೂಡಿಕೆ ಆಗಲಿದೆ. 5 ಕಂಪೆನಿಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿದ್ದು, ಇವುಗಳಿಂದ 223.61ಕೋಟಿ ರೂ.ಹರಿದು ಬರಲಿದೆ. ಒಟ್ಟು 55 ಯೋಜನೆಗಳಲ್ಲಿ ಹೆಚ್ಚಿನವು ಏರೋಸ್ಪೇಸ್, ಇಎಸ್‍ಡಿಎಂ, ಜನರಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಿವೆ ಎಂದು ಅವರು ವಿವರಿಸಿದರು.

ಅನುಮೋದನೆ ನೀಡಲಾಗಿರುವ ಯೋಜನೆಗಳ ಮೂಲಕ ಕೇನ್ಸ್ ಎಲೆಕ್ಟ್ರಾನಿಕ್ಸ್ ಚಾಮರಾಜನಗರ ಜಿಲ್ಲೆಯಲ್ಲಿ 495 ಕೋಟಿ ರೂ., ಎಸ್‍ಎಫ್‍ಒ ಟೆಕ್ನಾಲಜೀಸ್ ದೊಡ್ಡಬಳ್ಳಾಪುರದಲ್ಲಿ 490 ಕೋಟಿ ರೂ., ಆರ್ಬಿಟ್ ಇಂಡಸ್ಟ್ರಿಯಲ್ ಪಾರ್ಕ್ ಕೋಲಾರದಲ್ಲಿ 454 ಕೋಟಿ ರೂ., ಟೆರ್ರಾ ಸಕ್ರ್ಯೂಟ್ಸ್ ವಿಜಯಪುರದಲ್ಲಿ 441 ಕೋಟಿ ರೂ., ಬೆಲಾಟ್ರಿಕ್ಸ್ ಏರೋಸ್ಪೇಸ್ ಬೆಂ.ಗ್ರಾಮಾಂತರದಲ್ಲಿ 404 ಕೋಟಿ ರೂ., ಜಿಂದಾಲ್ ಪೋರ್ಟ್ ಬಳ್ಳಾರಿಯಲ್ಲಿ 380 ಕೋಟಿ ರೂ., ಶಾಹಿ ಎಕ್ಸ್‍ಪೆÇೀಟ್ರ್ಸ್ ಕಲಬುರಗಿಯಲ್ಲಿ 337 ಕೋಟಿ, ಇನ್ಫ್ರಾಗೆಲಾಕ್ಸಿ ದಕ್ಷಿಣ ಕನ್ನಡದಲ್ಲಿ 300 ಕೋಟಿ, ಹೈಟೆಕ್ ಮೆಟಾಲಿಕ್ಸ್ ವಿಜಯಪುರದಲ್ಲಿ 250 ಕೋಟಿ ರೂ., ಪ್ರಾಕ್ಸೈರ್ ಇಂಡಿಯಾ ಬೆಂ.ಗ್ರಾಮಾಂತರದ ಹೊಸಕೋಟೆಯಲ್ಲಿ 210 ಕೋಟಿ ರೂ., ಶೊಭಾ ರಿಯಾಲ್ಟಿ ಬೆಂ.ನಗರ ಜಿಲ್ಲೆಯಲ್ಲಿ 201.15 ಕೋಟಿ, ಆರ್‌ಎಂಝೆಡ್ ಹೊಸಕೋಟೆಯ ಎಂ.ಹೊಸಹಳ್ಳಿಯಲ್ಲಿ 198.62ಕೋಟಿ ರೂ.ಹೂಡಿಕೆ ಮಾಡಲಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ಗದಗಿನಲ್ಲಿ ರೋನ್ ಪವರ್ 177.20ಕೋಟಿ ರೂ., ವಾಹಿನಿ ಪಾಲಿಟೆಕ್ ತುಮಕೂರಿನಲ್ಲಿ 170 ಕೋಟಿ ರೂ., ಕೋಲಾರದಲ್ಲಿ ಏರಿಸ್ ರಿಫೈನರಿ 157.45 ಕೋಟಿ ರೂ., ಜುರೋಜಿನ್ ಡೆವಲಪರ್ಸ್ 137 ಕೋಟಿ ರೂ. ಮತ್ತು ಅರ್ಬೆನೋ ರಿಯಾಲ್ಟಿ 125 ಕೋಟಿ ರೂ., ಕೊಡಗಿನಲ್ಲಿ ಆಯತನ ಹಾಸ್ಪಿಟಾಲಿಟೀಸ್ 110.27 ಕೋಟಿ ರೂ. ಮತ್ತು ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಬಲ್ಕ್ ಲಿಕ್ವಿಡ್ ಸೊಲ್ಯೂಷನ್ಸ್ 110 ಕೋಟಿ ರೂ. ಬಂಡವಾಳ ತೊಡಗಿಸಲಿವೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಉಪಸ್ಥಿತರಿದ್ದರು.

Tags

Bengaluru Minister M.B. Patilinvestment
share
ವಾರ್ತಾಭಾರತಿ
ವಾರ್ತಾಭಾರತಿ
Next Story
X