ನ.5ಕ್ಕೆ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಭಾಗಶಃ ಸ್ಥಗಿತ

ಬೆಂಗಳೂರು, ನ.3: ನಮ್ಮ ಮೆಟ್ರೋನ ನೇರಳೆ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು, ಕಾರ್ಯವನ್ನು ನಿರ್ವಹಿಸಲು ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಗಳು ನ.5ರ ಬೆಳಗ್ಗೆ 7ಗಂಟೆಗೆ ಬದಲಾಗಿ 9ಗಂಟೆಗೆ ಪ್ರಾರಂಭವಾಗಲಿವೆ.
ಬೆಳಗ್ಗೆ 9 ಗಂಟೆಯ ನಂತರ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ, ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಲಭ್ಯವಿರುತ್ತದೆ.
ಚಲಘಟ್ಟ ಮತ್ತು ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ ಮತ್ತು ವೈಟ್‍ಫೀಲ್ಡ್ (ಕಾಡುಗೋಡಿ), ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮಾರ್ಗಗಳಲ್ಲಿ, ರೈಲುಗಳ ಸೇವೆಯು ಬೆಳಗ್ಗೆ 7ಗಂಟೆಗೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
For Maintenance works Metro train services between MG Road & Baiyappanahalli Metro Stations will start from 9.00 am instead of 7.00 am on 05/11/2023. In all other sections services will be as usual from 7.00 am. FKI pic.twitter.com/AMsuya2MQo
— ನಮ್ಮ ಮೆಟ್ರೋ (@cpronammametro) November 3, 2023







