ಬೆಂಗಳೂರು ಏರ್ಪೋರ್ಟ್ | 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ; ಕಾರಣವೇನು?

ಬೆಂಗಳೂರು : ಸೋಮವಾರ ತಡರಾತ್ರಿಯಿಂದ ಈವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು(ಡಿ.3) ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.
ವಿಮಾನಗಳ ಸಾಫ್ಟ್ ವೇರ್ ಸಂಬಂಧಿತ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 22 ವಿಮಾನಗಳ ಹಾರಾಟ ಈವರೆಗೆ ರದ್ದಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಕೊಲ್ಕತ್ತಾ, ದಿಲ್ಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





