Telegram ನಿಷೇಧವು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ಕ್ರಮವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

ಗೃಹ ಸಚಿವ ಪ್ರಿಯಾಂಕ್ ಖರ್ಗೆ (Photo: X)
ಬೆಂಗಳೂರು: ಟೆಲಿಗ್ರಾಮ್ ನಿಷೇಧವು ಸೋಮಾರಿತನದ ಮತ್ತು ಅಸಮರ್ಥತೆಯ ತಕ್ಷಣದ ಪ್ರತಿಕ್ರಿಯೆಯಾಗಿದ್ದು, ಇದು ನಿಜವಾದ ಸಮಸ್ಯೆಯನ್ನು ಪರಿಹರಿಸುವ ಬದಲು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ಕ್ರಮವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನ ಸಾಮಗ್ರಿ, ಅಪ್ಡೇಟ್ಗಳು, ಸಹಪಾಠಿಗಳ ಜೊತೆ ಸಂವಹನ ನಡೆಸಲು ಮತ್ತು ಪರೀಕ್ಷೆಯ ಸಿದ್ಧತೆಗಾಗಿ ಟೆಲಿಗ್ರಾಮ್ ಅನ್ನು ಬಳಸುತ್ತಾರೆ. NTA ಮತ್ತು ಕೇಂದ್ರ ಸರ್ಕಾರ ಪದೇ ಪದೇ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ವಿಫಲವಾದಾಗ, ವಿದ್ಯಾರ್ಥಿಗಳು ಏಕೆ ಶಿಕ್ಷೆ ಅನುಭವಿಸಬೇಕು" ಎಂದು ಪ್ರಶ್ನಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ-ವಿಳಂಬ, ಅವ್ಯವಸ್ಥೆ ಮತ್ತು ಅಪಾರದರ್ಶಕ ವ್ಯವಸ್ಥೆಗಳು NTAಯ ಟ್ರೇಡ್ ಮಾರ್ಕ್ ಆಗಿಬಿಟ್ಟಿದೆ. ಆ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುವ ಬದಲು, ಸರ್ಕಾರವು ಸಾಮಾಜಿಕ ತಾಣಗಳನ್ನು ನಿಷೇಧಿಸುವ ಮೂಲಕ ಇತರರರನ್ನು ಹೊಣೆಗಾರರನ್ನಾಗಿಸುತ್ತಿದೆ ಎಂದು ಸಚಿವರು ಟೀಕಿಸಿದ್ದಾರೆ.
ಸಮಸ್ಯೆ ಇರುವುದು ಟೆಲಿಗ್ರಾಮ್ ನಲ್ಲಿ ಅಲ್ಲ, ಕೇಂದ್ರ ಸರ್ಕಾರ ಮತ್ತು NTA ಯಲ್ಲಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Banning Telegram is a lazy and incompetent knee-jerk response that punishes students instead of fixing the real problem.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 19, 2026
Lakhs of students use Telegram for study material, updates, peer learning and exam preparation. Why should they suffer because the NTA and the Union…






