ಜಮ್ಮು-ಕಾಶ್ಮೀರ ರಣಜಿ ಕ್ರಿಕೆಟ್ ಆಡುತ್ತಿರುವುದು ನರೇಂದ್ರ ಮೋದಿಯ ಮುತ್ಸದ್ದಿ ನಾಯಕತ್ವದ ಫಲ ಎಂದ ಬಸವರಾಜ ಬೊಮ್ಮಾಯಿ!

ಬೆಂಗಳೂರು : ಜಮ್ಮು ಕಾಶ್ಮೀರ ಕ್ರಿಕೆಟ್ ತಂಡವು ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಆರ್ಟಿಕಲ್ 370 ರದ್ದತಿಯ ನಂತರದ ಹೊಸ ವಾತಾವರಣದ ಪ್ರತೀಕವಾಗಿದೆ ಎಂಬ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.
ಬೊಮ್ಮಾಯಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, ಜಮ್ಮು ಕಾಶ್ಮೀರ ಕ್ರಿಕೆಟ್ ತಂಡ ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯ ಜೀವನ ಮರುಕಳಿಸುತ್ತಿರುವುದಕ್ಕೆ ಸಂಕೇತವಾಗಿದೆ ಎಂದು ಹೇಳಿದ್ದರು. ಜೊತೆಗೆ, ಜಮ್ಮು ಕಾಶ್ಮೀರವು ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರವಾಗಿ ಭಾಗಿಯಾಗುತ್ತಿರುವುದು ನರೇಂದ್ರ ಮೋದಿ ಅವರ ದೃಢ ನಾಯಕತ್ವದ ಫಲವಾಗಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.
ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಬಿ.ಕೆ.ಹರಿಪ್ರಸಾದ್ ಅವರು, ಬಸವರಾಜ್ ಬೊಮ್ಮಾಯಿ ಅಂತವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಒಂದು ಸಾಮಾನ್ಯ ಗೂಗಲ್ ಸರ್ಚ್ ಮಾಡಿದರೂ ಜಮ್ಮು & ಕಾಶ್ಮೀರ ಕ್ರಿಕೆಟ್ ತಂಡ 1959-60ರಿಂದಲೇ ರಣಜಿ ಟ್ರೋಫಿಯಲ್ಲಿ ಆಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲವನ್ನೂ ಮೋದೀಜಿ ಮಾಡಿದ್ದು ಅನ್ನೋದೇ ಇವರ ಮಂತ್ರವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಅಲ್ಲದೇ ಬೊಮ್ಮಾಯಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಾಮಮೋಹನ್ ಬಿ.ಎಸ್. ಎಂಬವರು ಪ್ರತಿಕ್ರಿಯಿಸಿ, ಹೌದು ಏನೇ ಒಳ್ಳೆಯದು ಆದರೂ ಅದು ಮೋದಿಜಿ, ಏನೇ ಕೆಟ್ಟದ್ದು ಆದರೂ ಅದು ಈ ಹೊತ್ತಿಗೂ ನೆಹರೂನೇ ಕಾರಣ. ನಿಮಗೆ ರಾಜಕೀಯ ಬಿಟ್ಟು ವಾಸ್ತವ ಮಾತಾಡೋಕ್ಕೆ ಬರೋದಿಲ್ಲವಾ ಎಂದು ತಿಳಿಸಿದ್ದಾರೆ.
ದಿವ್ಯಾ ಗೌಡ ಎಂಬವರು, 1950-1960 ರಿಂದ ಜಮ್ಮು ಕಾಶ್ಮೀರ ರಣಜಿ ಆಟ ಆಡಿಕೊಂಡು ಬರುತ್ತಾ ಇದೆ. ಬಿಜೆಪಿ ಎಂದರೆ ಸುಳ್ಳು, ಬಿಜೆಪಿ ಅಂದರೆ ಮೋಸ, ಸುಳ್ಳೇ ಇವರ ಮನೆ ದೇವರು. ಯಾವುದೇ ಪೋಸ್ಟ್ ಮಾಡೋಕೆ ಮುಂಚೆ ಏನ್ ಮಾಡ್ತಾ ಇದ್ದೇನೆ ಎಂದು ತಿಳಿದುಕೊಂಡು ಮಾಡಿ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಕ್ರಿಕೆಟ್ ತಂಡವು ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಆರ್ಟಿಕಲ್ 370 ರದ್ದತಿಯ ನಂತರದ ಹೊಸ ವಾತಾವರಣದ ಪ್ರತೀಕವಾಗಿದೆ. ಇದು ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯ ಜೀವನ ಕ್ರಮೇಣ ಮರುಕಳಿಸುತ್ತಿರುವುದಕ್ಕೂ ಸ್ಪಷ್ಟ ಸಂಕೇತ.ಜಮ್ಮು ಕಾಶ್ಮೀರವು ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರವಾಗಿ ಭಾಗಿಯಾಗುತ್ತಿರುವುದು… pic.twitter.com/ukfuSchcC7
— Basavaraj S Bommai (@BSBommai) February 24, 2026
ಬಸವರಾಜ್ ಬೊಮ್ಮಾಯಿ ಅಂತವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ರು. 🤦🏽♂️ಒಂದು ಬೇಸಿಕ್ ಗೂಗಲ್ ಸರ್ಚ್ ಮಾಡಿದ್ರೆ ಗೊತ್ತಾಗ್ತಿತ್ತು ಜಮ್ಮು & ಕಾಶ್ಮೀರ ಕ್ರಿಕೆಟ್ ತಂಡ 1959 - 60 ರಿಂದ ರಣಜಿ ಆಡ್ತಿದೆ ಅಂತ.ಒಟ್ನಲ್ಲಿ ಎಲ್ಲವನ್ನೂ ಮೋದೀಜಿ ಮಾಡಿದ್ದು ಅನ್ನೋದೊಂದೇ ಮಂತ್ರ ಇವುಗಳದ್ದು. pic.twitter.com/ldQukvbHQN
— Hariprasad.B.K. (@HariprasadBK2) February 25, 2026






