ಮುಂದಿನ 2 ವರ್ಷ 11 ತಿಂಗಳು ಸಿದ್ದರಾಮಯ್ಯನವರೇ ಸಿಎಂ : ಬಸವರಾಜ ರಾಯರೆಡ್ಡಿ

ಬೆಂಗಳೂರು : ಮುಂದಿನ 2 ವರ್ಷ ಹಾಗೂ 11 ತಿಂಗಳು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಲ್ಲಿ ಯಾವ ಕ್ರಾಂತಿಯೂ ಇಲ್ಲ. ಈ ಬಗ್ಗೆ ಸಚಿವ ರಾಜಣ್ಣಗೆ ಕೇಳಬೇಕು. ಅಲ್ಲದೆ, ಯಾವುದೇ ಕ್ರಾಂತಿಯೂ ಆಗಲ್ಲ. ಸಿಎಂ ಸ್ಥಾನ ಬದಲಾವಣೆಯಂತೂ ಆಗುವುದೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂನ ಬದಲಾವಣೆ ಯಾರು ಮಾಡಬೇಕು ನಾವೇ ಅಲ್ವಾ? ನಾನೂ ಕೂಡ ಒಬ್ಬ ಮತದಾರ, ಸಿಎಂ ಗೆ ಈಗಲೂ ಬಹುಮತ ಇದೆ. ಸಿದ್ದರಾಮಯ್ಯ ಗೆ ಇರುವಷ್ಟು ಜನ ಬೆಂಬಲ ಯಾರಿಗೂ ಇಲ್ಲ. ಆದರೆ ಸಿದ್ದರಾಮಯ್ಯ ‘ನಾಟ್ ಎ ವೀಕ್ ಚೀಫ್ ಮಿನಿಸ್ಟರ್’ ಎಂದು ಉಲ್ಲೇಖಿಸಿದರು.
ನಾವೆಲ್ಲ ಸಿಎಂ ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ. ಜತೆಗೆ, ನಾವು ಹಳೆ ಸಿದ್ದರಾಮಯ್ಯ ಆಗಿ ಎಂದು ಮನವಿ ಮಾಡುತ್ತಿದ್ದೇವೆ. ನಾವೆಲ್ಲ ಸಲಹೆ ಕೊಟ್ಟು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಶಕ್ತಿ ತುಂಬಿಸುತ್ತೇವೆ ಎಂದು ಅವರು ಹೇಳಿದರು.





