ಬಿ.ಇಡಿ. ಕೋರ್ಸ್ನ ಸೀಟು ಹಂಚಿಕೆ ಪಟ್ಟಿ ಪ್ರಕಟ

ಸಾಂದರ್ಭಿಕ ಚಿತ್ರ | PC : gemini
ಬೆಂಗಳೂರು : 2025ನೇ ಸಾಲಿನ ಬಿ.ಇಡಿ. ಕೋರ್ಸ್ನ ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ https://schooleducation.karnataka.gov.in/ ನಲ್ಲಿ ಬಿಡುಗಡೆಗೊಳಿಸಿದೆ.
ಅಭ್ಯರ್ಥಿಗಳು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ನ.25 ರಿಂದ ಡಿ.5ರವರೆಗೆ ನಿಗದಿತ ಶುಲ್ಕದ ಚಲನ್ ಅನ್ನು ಮುದ್ರಿಸಿಕೊಂಡು ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಬೇಕು.
ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರವನ್ನು ಪಡೆದುಕೊಳ್ಳಬಹುದು. ಹಾಗೆಯೇ ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಬೇಕು.
ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಿ ಅಭಿಮತವನ್ನು ದಾಖಲಿಸಬಹುದು. ಅಭಿಮತವನ್ನು ದಾಖಲಿಸದೇ ಇರುವ ಅಭ್ಯರ್ಥಿಗಳನ್ನು ಬಿಟ್ಟು ಎರಡನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ಡಿ.8ರಂದು ಬಿಡುಗಡೆಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.







