ಧರ್ಮಸ್ಥಳ ಪ್ರಕರಣ | ಶವ ಸಿಗಲಿಲ್ಲವಾದರೆ ಅನಾಮಿಕ ವ್ಯಕ್ತಿಯನ್ನು ನೇಣಿಗೆ ಹಾಕಬೇಕು : ಬೇಳೂರು ಗೋಪಾಲಕೃಷ್ಣ

ಬೇಳೂರು ಗೋಪಾಲಕೃಷ್ಣ
ಬೆಂಗಳೂರು, ಆ.11 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ ಪ್ರಕರಣ ಸಂಬಂಧ ಶವ ಸಿಗಲಿಲ್ಲವಾದರೆ ಆ ಅನಾಮಿಕ ವ್ಯಕ್ತಿಯನ್ನು ನೇಣಿಗೆ ಹಾಕಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಹಾಗೂ ಪೂಜ್ಯರಿಗೆ ಹಾನಿಯಾಗಲು ಬಿಡಲ್ಲ. ಸದ್ಯ ತನಿಖೆ ನಡೆಯುತ್ತಿದ್ದು, ಎಲ್ಲೂ ಶವಗಳು ಸಿಗಲಿಲ್ಲ ಅಂದಾಗ ಅನಾಮಿಕನನ್ನು ಬಿಡಲು ಸಾಧ್ಯವಿಲ್ಲ. ಅವನನ್ನು ನೇಣು ಹಾಕಬೇಕು ಎಂದು ಹೇಳಿದರು.
ಅದೇ ರೀತಿ, ದೇವಸ್ಥಾನದ ಒಳಗಡೆ ಅಗೆಯಲು ಬಿಡುವುದಿಲ್ಲ ಎಂದ ಅವರು, ಧರ್ಮಸ್ಥಳದಲ್ಲಿ ಸೌಜನ್ಯಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೊಡ್ಡ ಹೋರಾಟ ನಡೆದಿದೆ. ಈಗಿನ ಆರೋಪಗಳ ಕುರಿತು ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಎಸ್ಐಟಿ ತನಿಖೆಗೆ ಕೊಟ್ಟಿದೆ. ಜತೆಗೆ, ಇದರಲ್ಲಿ ಇನ್ನೊಂದು ಸಮುದಾಯದವರ ಪಾತ್ರವಿಲ್ಲ ಎಂದು ತಿಳಿಸಿದರು.
Next Story





