ಬೆಂಗಳೂರು: ಟೋಲ್ ಶುಲ್ಕ ತಪ್ಪಿಸಲು ಹೋಗಿ ಸಿಬ್ಬಂದಿಗೆ ಢಿಕ್ಕಿ ಹೊಡೆದ ಕಾರು ಚಾಲಕ

PHOTO:PTI
ಬೆಂಗಳೂರು: ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹೋಗಿ ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಢಿಕ್ಕಿ ಹೊಡೆದ ಘಟನೆ ದೇವನಹಳ್ಳಿಯ ಏರ್ಪೋರ್ಟ್ ಟೋಲ್ ಬಳಿ ವರದಿಯಾಗಿದೆ.
ದೇವನಹಳ್ಳಿ ಟೋಲ್ ಬಳಿ ವಾಹನಗಳಿಂದ ಸಿಬ್ಬಂದಿ ಟೋಲ್ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದ ವೇಳೆ ಕಾರು ಚಾಲಕನೊಬ್ಬ ಟೋಲ್ ನಲ್ಲಿ ಶುಲ್ಕ ಕಟ್ಟುವುದನ್ನು ತಪ್ಪಿಸಲು ಹೋಗಿ ಈ ಕೃತ್ಯ ಎಸಗಿದ್ದಾನೆ.
ಟಾಟಾ ಇಂಡಿಕಾ ಕಾರು ವಿಮಾನ ನಿಲ್ದಾಣದ ಕಡೆಯಿಂದ ಬಂದಿದೆ. ಟೋಲ್ ಬಳಿ ಬಸ್ವೊಂದರ ಹಿಂದೆ ಈ ಕಾರು ನಿಂತಿತ್ತು. ಬಸ್ ಶುಲ್ಕ ಕಟ್ಟಿ ಮುಂದೆ ತೆರಳುವಾಗ ಹಿಂದೆ ನಿಂತಿದ್ದ ಈ ಕಾರು ಟೋಲ್ ತಪ್ಪಿಸಿಕೊಳ್ಳಲು ಮುಂದೆ ನುಗ್ಗಿದೆ. ಈ ವೇಳೆ, ಟೋಲ್ ಸಿಬ್ಬಂದಿ ಕಾರು ಚಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆತ ಸಿಬ್ಬಂದಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
Next Story





