ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಸಾವು
![ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಸಾವು ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಸಾವು](https://www.varthabharati.in/h-upload/2023/09/01/1185887-police-dog.webp)
ಕಾವ್ಯ
ಬೆಂಗಳೂರು: 9 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಕಾವ್ಯ ಎಂಬ ಹೆಸರಿನ ಶ್ವಾನ, ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದೆ.
2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಯಾಯಿತು. 9 ವರ್ಷ, 6 ತಿಂಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕಾವ್ಯ, ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿತ್ತು.
ಗುರುವಾರ (ಆಗಸ್ಟ್ 31) ಶ್ವಾನ ಕಾವ್ಯಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಜತೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Next Story