ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಟೆಕ್ಕಿ ಮತದೇಹ ಪತ್ತೆ

ಮೃತ ಮಹಿಳೆ
ಬೆಂಗಳೂರು, ಜು.18: ನಗರದ ಜೋಗುಪಾಳ್ಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಟೆಕ್ಕಿ ಮತದೇಹ ಪತ್ತೆಯಾಗಿರುವ ಘಟನೆ ಮಂಗಳವಾರ ವರದಿಯಾಗಿದೆ.
ದಿವ್ಯಾ (30 ವರ್ಷ) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
2014ರಲ್ಲಿ ದಿವ್ಯಾಳ ವಿವಾಹವಾಗಿದ್ದು, ಗಂಡನ ಕುಟುಂಬಸ್ಥರಿಂದ ಮಾನಸಿಕ ಕಿರುಕುಳ ಆರೋಪವಿದ್ದು , ಸೋಮವಾರ ಪತ್ನಿ ಕೋಣೆಯೊಳಗಿಂದ ಲಾಕ್ ಮಾಡಿಕೊಂಡಿದ್ದಾಳೆ ಎಂದು ದಿವ್ಯಾ ಪೋಷಕರಿಗೆ ಅರವಿಂದ್ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದು ಮಗಳ ಮನೆಗೆ ದೌಡಾಯಿಸಿದ್ದಾರೆ.ಕುಟುಂಬಸ್ಥರು ಬರೋ ವೇಳೆಗೆ ದಿವ್ಯಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಮಾಡಿದ್ದು, ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗು ಪೊಲೀಸರಿಂದ ಆರೋಪಿ ಪತಿ ಅರವಿಂದನನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ.
Next Story





