ʼಆರೆಸ್ಸೆಸ್ 3 ದಿನಗಳಲ್ಲಿ ಪಡೆಯನ್ನು ಸಿದ್ಧಪಡಿಸಬಲ್ಲದುʼ ಎಂಬ ಭಾಗವತ್ ಹೇಳಿಕೆ ರಾಷ್ಟ್ರೀಯ ಭದ್ರತೆ ಕುರಿತು ಗಂಭೀರ ಪ್ರಶ್ನೆ ಎತ್ತುತ್ತದೆ: ಸಚಿವ ಪ್ರಿಯಾಂಕ್ ಖರ್ಗೆ

ಮೋಹನ್ ಭಾಗವತ್ (PTI) / ಪ್ರಿಯಾಂಕ್ ಖರ್ಗೆ
ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಸೇನೆಯಂತಲ್ಲದೆ, ಆರೆಸ್ಸೆಸ್ ಕೇವಲ ಮೂರು ದಿನಗಳಲ್ಲಿ ಗಡಿಯಲ್ಲಿ ಹೋರಾಡಲು ಒಂದು ಪಡೆಯನ್ನು ಸಿದ್ಧಪಡಿಸಬಲ್ಲದು ಮತ್ತು ಸೈನ್ಯವನ್ನು ಸಂಗ್ರಹಿಸಬಲ್ಲದು’ ಎಂದು ಹೇಳಿರುವುದಾಗಿ ಉಲ್ಲೇಖಿಸಿರುವ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಈ ಕುರಿತು ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಒಂದು NGO ಭಾರತದ ಸಶಸ್ತ್ರ ಪಡೆಗಳಿಗಿಂತ ವೇಗವಾಗಿ ಸೈನ್ಯವನ್ನು ಸಜ್ಜುಗೊಳಿಸಬಲ್ಲದು ಎಂದು ಪ್ರತಿಪಾದಿಸಿದರೆ, ಅದರ ರಚನೆ, ತರಬೇತಿ, ಹಣಕಾಸು, ಕಮಾಂಡ್ ಚೈನ್ ಮತ್ತು ಹೊಣೆಗಾರಿಕೆಯನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯ ಸರ್ಕಾರಕ್ಕೆ ಇರಬೇಕಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಒಂದು ಸ್ವಯಂಸೇವಾ ಸಂಸ್ಥೆ ಸೈನ್ಯವನ್ನು ಸಜ್ಜುಗೊಳಿಸಬಲ್ಲದು ಎಂಬ ರೀತಿಯ ಹೇಳಿಕೆಗಳು ಕೇವಲ ಸಾಮಾನ್ಯ ಹೇಳಿಕೆಗಳಲ್ಲ. ಅವು ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ’ ಎಂದು ಖರ್ಗೆ ಹೇಳಿದ್ದಾರೆ.
RSS chief Mohan Bhagwat claims that, unlike the Army, the @RSSorg can prepare a force and raise an army within three days to fight at the border.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 16, 2026
If an “NGO” claims it can mobilise an army faster than the armed forces of India, shouldn’t a State Government have the right to know… pic.twitter.com/N9MAnCpAYl






