ಮುಂಗಾರು ಅಧಿವೇಶನ | ಖಾಸಗಿ ಬಡಾವಣೆಗಳಿಗೆ ಸರಕಾರ ಮೂಲಸೌಕರ್ಯ ಒದಗಿಸಲ್ಲ: ಭೈರತಿ ಸುರೇಶ್

ಬೆಂಗಳೂರು, ಆ.12: ಖಾಸಗಿ ವಲಯದವರು ನಿರ್ಮಾಣ ಮಾಡುವ ಬಡಾವಣೆಗಳಿಗೆ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಅವರೇ ಒದಗಿಸಿಕೊಡಬೇಕು. ಸರಕಾರದಿಂದ ಇದನ್ನು ಮಾಡಿಕೊಡಲಾಗುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿಯವರು ನಿರ್ಮಿಸುವ ಬಡಾವಣೆಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅವರೇ ನಿರ್ಮಾಣ ಮಾಡಿಕೊಡಬೇಕು. ಇದನ್ನು ಸರಕಾರ ಹೇಗೆ ಮಾಡಿಕೊಡಲು ಸಾಧ್ಯ? ಎಂದು ಮರುಪ್ರಶ್ನೆ ಮಾಡಿದರು.
ಬಡಾವಣೆ ನಿರ್ಮಾಣ ಮಾಡುವಾಗಲೇ ಸಂಬಂಧಪಟ್ಟ ಮಾಲಕರು ಅಲ್ಲಿನ ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕೆಂಬ ನಿಯಮವಿದೆ. ಸರಕಾರದಿಂದ ನಿರ್ಮಾಣ ಮಾಡುವ ಬಡಾವಣೆಗಳಿಗೆ ಮಾತ್ರ ನಾವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಖಾಸಗಿಯವರಿಗೂ ನಮಗೂ ಏನು ಸಂಬಂಧವಿಲ್ಲ ಎಂದು ಭೈರತಿ ಸುರೇಶ್ ಹೇಳಿದರು.
Next Story





