ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಜೊತೆಗೆ ವಿಪಕ್ಷ ನಾಯಕನ ಕುರ್ಚಿಯೂ ಅಲ್ಲಾಡುತ್ತಿದೆ: ಲಕ್ಷ್ಮಣ್ ಸವದಿ

ಶಾಸಕ ಲಕ್ಷ್ಮಣ್ ಸವದಿ
ಬೆಂಗಳೂರು: ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಜೊತೆಗೆ ವಿರೋಧ ಪಕ್ಷದ ನಾಯಕನ ಸ್ಥಾನದ ಕುರ್ಚಿಯೂ ಅಲ್ಲಾಡುತ್ತಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲು ಬಿಜೆಪಿಯಲ್ಲಿದ್ದ ಕಾರಣ, ಈಗಲೂ ಅಲ್ಲಿ ಸ್ನೇಹಿತರಿದ್ದಾರೆ. ಅವರು ಹೇಳುವ ಪ್ರಕಾರ, ಪಕ್ಷದ ಅಧ್ಯಕ್ಷ ಸ್ಥಾನದ ಜೊತೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಅಲ್ಲಾಡುತ್ತಿದೆ, ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ ಎಂದರು.
ನಾನು ಆರ್.ಅಶೋಕ್ ಅವರಿಗೆ ನೀಡುವ ಸಲಹೆಯೆಂದರೆ, ತಮ್ಮ ತಟ್ಟೆಯಲ್ಲಿ ಸತ್ತುಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆಯಲಿ, ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ನಂತರ ಯೋಚನೆ ಮಾಡಲಿ ಎಂದು ಲಕ್ಷ್ಮಣ್ ಸವದಿ ಹೇಳಿದರು.
ಆರ್.ಅಶೋಕ್ ಪಕ್ಷದ ವರಿಷ್ಠರನ್ನು ಸಂತೋಷವಾಗಿಡಲು ನಮ್ಮ ಸರಕಾರದ ಬಗ್ಗೆ ಏನನ್ನಾದರೂ ಹೇಳುತ್ತಿರಬೇಕಾಗುತ್ತದೆ, ಇಲ್ಲದಿದ್ದರೆ ಯಾಕೆ ಸುಮ್ಮನಿರುವೆ ಅಂತ ಪ್ರಶ್ನಿಸುತ್ತಾರೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.
Next Story