ಸಿಜೆಐ ಮೇಲೆ ಶೂ ಎಸೆತ ಪ್ರಕರಣ | ಬಿಜೆಪಿಗರು ಕೆರಳಿ ಕೆಂಡವಾಗುವ ಬದಲು ಸಂಭ್ರಮಾಚರಣೆಯಲ್ಲಿದ್ದಾರೆಯೇ? : ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಅ. 8: ‘ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಮೇಲಿನ ಶೂ ದಾಳಿಗೆ ಭಾರತ ಕೆರಳಿರುವುದು ನಿಜ ಪ್ರಧಾನಿಯವರೇ. ಆದರೆ ಬಿಜೆಪಿಗರು ಯಾಕೆ ಕೆರಳಿ ಕೆಂಡವಾಗಲಿಲ್ಲ? ಬಿಜೆಪಿಗರು ನೀವು ಹೇಳಿದ ಕೆರಳಿ ಕೆಂಡವಾದ ಭಾರತದ ಭಾಗವಾಗಿಲ್ಲವೇ? ಅಥವಾ ಕೆರಳಿ ಕೆಂಡವಾಗುವ ಬದಲು ಸಂಭ್ರಮಾಚರಣೆ ಸಡಗರದಲ್ಲಿದ್ದಾರೆಯೇ?’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಹಿಂದುತ್ವವಾದಿ ಗೋಡ್ಸೆ ಎಂಬ ಉಗ್ರನಿಂದ ಮಹಾತ್ಮಾ ಗಾಂಧಿಯ ಹತ್ಯೆಯನ್ನು ಸಂಘ ಪರಿವಾರ ದೇಶದಲ್ಲಿ ಸಂಭ್ರಮಾಚರಣೆ ನಡೆಸಿದ ಹೀನ ಪರಂಪರೆಯವರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲಿನ ಸನಾತನಿಯ ಕೃತ್ಯವನ್ನೂ ಸಂಭ್ರಮಿಸುತ್ತಿದ್ದಾರೆಯೇ ಹೊರತು ಖಂಡಿಸಲು ಸಾಧ್ಯವೇ? ಕೆರಳಿ ಕೆಂಡವಾಗಲು ಸಾಧ್ಯವೇ?’ ಎಂದು ಕೇಳಿದ್ದಾರೆ.
‘ಹತ್ಯೆಗಳನ್ನು ನಡೆಸುವುದು ನಂತರ ಅದರ ಸಮರ್ಥನೆಗೆ ನಿಲ್ಲುವುದು ಸಂಘಿಗಳ ಖಯಾಲಿ. ಗುಜರಾತಿನ ವಡೋದರದ ಬೀದಿಯಲ್ಲಿ ಮುಸ್ಲಿಮ್ ಸಮುದಾಯದ ಗರ್ಭಿಣಿ ಹೆಣ್ಣುಮಗಳ ಹೊಟ್ಟೆಯಿಂದ ಮಗುವನ್ನು ಕೊಂದು ತ್ರಿಶೂಲದಲ್ಲಿ ಸಿಕ್ಕಿಸಿಕೊಂಡು ಮೆರವಣಿಗೆ ಮಾಡಿದವರು ಯಾರು?, ಸಂಭ್ರಮಿಸಿದವರು ಯಾರು?. ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಗೆ ಕ್ಷಮಾದಾನ ನೀಡಿದ ಗುಜರಾತಿನ ಸರಕಾರ ಯಾವುದು?. ಬಿಡುಗಡೆ ಮಾಡಿ ಅಪರಾಧಿಗಳನ್ನು ಸಂಭ್ರಮಿಸಿದವರು ಯಾರು?’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ಗೌರಿ, ಸಂಶೋಧಕ ಕಲ್ಬುರ್ಗಿ, ವಿಚಾರವಾದಿ ದಾಬೋಲ್ಕರ್ ಅಂತಹ ಸಾಹಿತಿ, ಚಿಂತಕರನ್ನ ಹತ್ಯೆ ಮಾಡಿದವರು ಯಾರು?, ಸುಪಾರಿ ನೀಡಿದವರು ಯಾರು?. ಹತ್ಯೆಯ ನಂತರ ಸಂಭ್ರಮ ಮಾಡಿದವರು ಯಾರು?. ಅದ್ಯಾವ ಸಿದ್ದಾಂತ ಸಮಾಜದಲ್ಲಿ ದ್ವೇಷ, ಅಸೂಯೆ, ಕೊಲೆ, ಅತ್ಯಾಚಾರಿಗಳ ಪರವಾಗಿ ರಣಕೇಕೆ ಹಾಕುವಂತೆ ಮಾಡುತ್ತಿದೆ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರಶ್ನೆಗಳು ಸಾವಿರಾರು ಹುಟ್ಟತ್ತಲೇ ಇದೆ ಆದರೆ ಉತ್ತರ ಮಾತ್ರ ಅತ್ಯಂತ ಸ್ಪಷ್ಟವಾಗಿದೆ. ಈ ಸಮಾಜಘಾತುಕ ಶಕ್ತಿಗಳ ಲಾಲನೆ, ಪಾಲನೆ, ಪೋಷಣೆ, ರಕ್ಷಣೆಗೆ ನಿಲ್ಲುತ್ತಿರುವುವುದು ಮಾತ್ರ ಇಡೀ ಸಂಘಪರಿವಾರ...!. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಕೊಮುವಾದಿ ಶಕ್ತಿಗಳನ್ನು ಬುಡಸಮೇತ ಕಿತ್ತು ಹಾಕದೆ ಇದ್ದರೆ ಭವಿಷ್ಯತ್ತಿನ ಭಾರತ ಭಾರಿ ಅಪಾಯ ಎದುರಿಸಬೇಕಾದೀತು’ ಎಂದು ಅವರು ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಮೇಲಿನ ಶೂ ದಾಳಿಗೆ ಭಾರತ ಕೆರಳಿರುವುದು ನಿಜಾ ಪ್ರಧಾನಿಗಳೇ, ಆದರೆ ಬಿಜೆಪಿಗರು ಯಾಕೆ ಕೆರಳಿ ಕೆಂಡವಾಗಲಿಲ್ಲ? ಬಿಜೆಪಿಗರು ನೀವು ಹೇಳಿದ ಕೆರಳಿ ಕೆಂಡವಾದ ಭಾರತದ ಭಾಗವಾಗಿಲ್ಲವೇ? ಅಥವಾ ಕೆರಳಿ ಕೆಂಡವಾಗುವ ಬದಲು ಸಂಭ್ರಮಾಚರಣೆ ಸಡಗರದಲ್ಲಿದ್ದಾರೆಯೇ?
— Hariprasad.B.K. (@HariprasadBK2) October 8, 2025
ಹಿಂದುತ್ವವಾದಿ ಗೋಡ್ಸೆ ಎಂಬ ಉಗ್ರನಿಂದ ಮಹಾತ್ಮಾ…







