‘ಸಂತ ಸೇವಾಲಾಲ್ ಪ್ರಶಸ್ತಿ’ಗೆ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಆಯ್ಕೆ

ಬಿ.ಟಿ. ಲಲಿತಾ ನಾಯಕ್
ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಇದೇ ಮೊದಲಬಾರಿಗೆ ನೀಡುವ ಪ್ರತಿಷ್ಠಿತ ‘ಸಂತ ಸೇವಾಲಾಲ್ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವ ಬಿ.ಟಿ. ಲಲಿತಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು 1ಲಕ್ಷ ರೂ. ನಗದು, ನೆನಪಿನ ಕಾಣಿಕೆ ಒಳಗೊಂಡಿರುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಪ್ರಕಟಿಸಿದ್ದಾರೆ.
ಬುಧವಾರ ಅಕಾಡೆಮಿಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2023ನೆ ಸಾಲಿನ ‘ಗೌರವ ಪ್ರಶಸ್ತಿ’ಗೆ ಶಿರಸಿಯ ಹಿರಿಯ ಸಾಹಿತಿ ಡಾ.ಕೆ.ಬಿ.ಪವಾರ, ಶಿವಮೊಗ್ಗದ ಡಾ.ಸಣ್ಣರಾಮ, ಬಾಗಲಕೋಟೆಯ ನಾಟಕಕಾರ ಶಂಕರ್ ಎಚ್. ಲಮಾಣಿ, ಕಲಾವಿದ ಬಾಬುಲಚ್ಚು ರಾಠೋಡ, ವಿಜಯನಗರದ ಕಲಾವಿದ ರಾಮಚಂದ್ರ ಭಗವಾನ್ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
2024ನೆ ಸಾಲಿನ ‘ಗೌರವ ಪ್ರಶಸ್ತಿ’ಗೆ ಚಿತ್ರದುರ್ಗದ ಜಾನಪದ/ವೈದ್ಯೆ/ಕಸೂತಿ ಕಲಾವಿದೆ ಪುಟ್ಟಿಬಾಯಿ ಲಕ್ಷ್ಮಣ್ ನಾಯಕ್, ಗುಲ್ಬರ್ಗದ ಗಾಯನ ಕಲಾವಿದ ಮಹದೇವ ದಮಳ ಚವ್ಹಾಣ, ಕೊಪ್ಪಳದ ಕಲಾವಿದ ಪಿ.ಲಕ್ಷ್ಮಣ್ ನಾಯಕ್, ಧಾರವಾಡ ನೃತ್ಯ ಕಲಾವಿದೆ ಸೀತವ್ವ ಲಮಾಣಿ ಹಾಗೂ ದಾವಣಗೆರೆಯ ಭಾಷಾ ಜಾಗೃತಿ ಕಲಾವಿದ ರಾಘವೇಂದ್ರ ನಾಯಕ್ ಭಾಜನರಾಗಿದ್ದಾರೆ. 2023 ಮತ್ತು 2024ನೆ ಸಾಲಿನ ‘ಗೌರವ ಪ್ರಶಸ್ತಿ’ ಪುರಸ್ಕøತರಿಗೆ ತಲಾ 50ಸಾವಿರ ರೂ.ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಾರ್ಷಿಕ ಪ್ರಶಸ್ತಿ:
2023ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ಬಸವಕಲ್ಯಾಣ ತಾಲೂಕಿನ ಕಲಾವಿದ ಗೋವಿಂದ, ಉತ್ತರ ಕನ್ನಡದ ಕಲಾವಿದೆ ಸೋಮ್ಲಾವ್ವಾ ಪುಟ್ಟಪ್ಪಾ ಲಮಾಣಿ, ಚಿತ್ರದುರ್ಗದ ನಗಾರಿ ಕಲಾವಿದ ವೆಂಕಟೇಶ್ ನಾಯ್ಕ, ದಾವಣಗೆರೆಯ ಗಾಯಕ ಕುಬೇರನಾಯಕ್ ಎಲ್., ಧಾರವಾಡದ ಬಂಜಾರ ನೃತ್ಯ ತರಬೇತಿ ಕಲಾವಿದೆ ಸುಮಂಗಲವ್ವ ಪೊ.ಲಂಬಾಣಿ, ಚಾಮರಾಜನಗರದ ಕಲಾವಿದ ರಾಜನಾಯ್ಕ ಬಿನ್ ಗೋಪಾಲ್ ನಾಯ್ಕ, ವಿಜಯನಗರದ ಕಸೂತಿ ಕಲಾವಿದೆ ಡಾ.ಬಿ.ಎಸ್.ಪುಷ್ಪಾ, ಹಾವೇರಿಯ ನಟ ಸುನೀಲ ಕುಮಾರ ಚವ್ಹಾಣ, ರಾಮನಗರದ ಪೂಜಾ ಕುಣಿತ ಕಲಾವಿದ ಹನುಮಂತನಾಯ್ಕ, ಬೀದರ್ನ ಕಸೂತಿ ಕಲಾವಿದೆ ಆಶಾ ರಾಠೋಡ್ ಭಾಜನರಾಗಿದ್ದಾರೆ.
2024ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ಹೂವಿನಹಡಗಲಿಯ ಡಾ.ಎಲ್.ಪಿ.ನಾಯಕ ಕಠಾರಿ, ಕನಕಪುರದ ಭಾಗ್ಯಬಾಯಿ ಕೆ., ಕೊಪ್ಪಳದ ಛತ್ರಪ್ಪ ತಂಬೂರಿ, ರಾಮನಗರದ ಬಂಜಾರ ವಾಝ, ಪಟ ಕುಣಿತ ಕಲಾವಿದರಾದ ಕಾಂತನಾಯಕ್, ಚಿತ್ರದುರ್ಗದ ಎಸ್.ಮೀರ್ಯಾನಾಯ್ಕ್ ಮತ್ತು ಗದಗದ ರಮೇಶ ಮಂಗ್ಲಪ್ಪ ಲಮಾಣಿ, ದಾವಣಗೆರೆಯ ಸಿ.ಎಚ್.ಉಮೇಶ್ ನಾಯಕ್, ವಿಜಯಪುರದ ಅಶೋಕ ಸೋಮಲು ವಾಲಿಕಾರ, ಬೆಂಗಳೂರಿನ ಪತ್ರಕರ್ತ ಎಲ್.ಎಂ.ನಾಗರಾಜು ಹಾಗೂ ವಿಜಯನಗರ ಜ್ಯೋತಿ ಎನ್. ಭಾಜನರಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ಮೊತ್ತವು 25ಸಾವಿರ ರೂ.ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿಯೇ ಹಮ್ಮಿಕೊಂಡು ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗೋವಿಂದಸ್ವಾಮಿ ತಿಳಿಸಿದರು.
ಬಂಜಾರ ವಿಶ್ವಕೋಶ ರಚಿಸಲು ಪ್ರೊ.ಬರಗೂರು ರಾಮಚಂದ್ರ ನೇತೃತ್ವ ಸಮಿತಿಯು ತೀರ್ಮಾನಿಸಿದೆ. ಸಂಸ್ಕೃತಿ, ಹಬ್ಬ, ಭಾಷೆ, ನೃತ್ಯ ಎಲ್ಲವೂ ಇದರಲ್ಲಿ ಸೇರಿರುತ್ತದೆ. 8 ಕೋಟಿ ರೂ.ವೆಚ್ಚವಾಗುತ್ತದೆ. ಸರಕಾರಕ್ಕೆ ಪ್ರಸ್ತಾವನೆಗೆ ಸಲ್ಲಿಸಲಾಗುವುದು. ಬಂಜಾರ ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಜಾತಿ ಜನಗಣತಿ ಆಗಬೇಕು ಎಂದು ಗೋವಿಂದಸ್ವಾಮಿ ಆಗ್ರಹಿಸಿದರು.