ರೌಡಿಶೀಟರ್ ಬಿಕ್ಲುಶಿವ ಕೊಲೆ ಪ್ರಕರಣ | ಪ್ರಮುಖ ಆರೋಪಿ ಜಗದೀಶ್ನ ಪರಿಚಯವಿಲ್ಲ : ಬೈರತಿ ಬಸವರಾಜ್

ಬೈರತಿ ಬಸವರಾಜ್
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್ ಪರಿಚಯವಿಲ್ಲ, ಯಾರೆಂದು ಗೊತ್ತಿಲ್ಲ ಎಂದು ಪ್ರಕರಣದ ಐದನೇ ಆರೋಪಿಯಾದ ಬಿಜೆಪಿ ಶಾಸಕ ಬೈರತಿ ಬಸವರಾಜ್ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹತ್ಯೆ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಪೊಲೀಸರು ವಿಚಾರಣೆಗೆ ಕರೆದಿದ್ದರು. ಅದಕ್ಕೆ ಸಹಕರಿಸಿದ್ದೇನೆ. ಜುಲೈ 23ರಂದು ಮತ್ತೆ ವಿಚಾರಣೆಗೆ ಕರೆದಿದ್ದು ಅಂದು ಹಾಜರಾಗುತ್ತೇನೆ ಎಂದರು.
ಹಿನ್ನೆಲೆ: ರೌಡಿಶೀಟರ್ ಶಿವಪ್ರಕಾಶ್ ಯಾನೆ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಆತನ ತಾಯಿ ನೀಡಿದ ದೂರಿನ ಮೇರೆಗೆ ಮಾಜಿ ಸಚಿವ ಹಾಗೂ ಕೆ.ಆರ್.ಪುರಂ. ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹಾಗೂ ಇತರ ಐವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
Next Story





