‘ಒಳಮೀಸಲಾತಿ ಕುರಿತು ಚರ್ಚೆ’ ಸಚಿವ ಸಂಪುಟ ಸಭೆ ಮುಂದೂಡಿಕೆ

ಬೆಂಗಳೂರು, ಆ.14 : ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿರುವ ವರದಿ ಕುರಿತು ಚರ್ಚಿಸಲು ಆ.16ರ ಸಂಜೆ 4ಗಂಟೆಗೆ ಕರೆಯಲಾಗಿದ್ದ ವಿಶೇಷ ಸಂಪುಟ ಸಭೆಯನ್ನು ಆ.19ರ ಸಂಜೆ 5ಗಂಟೆಗೆ ಮುಂದೂಡಲಾಗಿದೆ ಎಂದು ಸರಕಾರದ ಅಪರ ಕಾರ್ಯದರ್ಶಿ(ಸಚಿವ ಸಂಪುಟ) ಆರ್.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





