ಸಿಇಟಿ ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವು ಇಂದು(ಮೇ 24) ಪ್ರಕಟವಾಗಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದರು. ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುಧಾಕರ್ ಹೇಳಿದರು.
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆ ನಂತರ https://cetonline.Karnataka.gov.in/ugcetrank2025/checkresult.aspx ಅಥವಾ https://karresults.nic.in ಜಾಲತಾಣಗಳಿಗೆ ಸಂಪರ್ಕಿಸಿ ಪರಿಶೀಲಿಸಬಹುದಾಗಿದೆ.
ಸಿಇಟಿ ವಿವಿಧ ಸೆಕ್ಷನ್ಗಳ ರ್ಯಾಂಕಿಂಗ್ ವಿವರ :
ನರ್ಸಿಂಗ್ :
ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಮೊದಲ ರ್ಯಾಂಕ್, ಆತ್ರೇಯ ಎರಡನೇ ರ್ಯಾಂಕ್, ಶಾಪಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಎಂಜಿನಿಯರಿಂಗ್ :
ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ಮೊದಲ ರ್ಯಾಂಕ್, ಸಾತ್ವಿಕ್ ಬಿರಾದರ್ ಎರಡನೇ ರ್ಯಾಂಕ್, ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ ಗಳಿಸಿದ್ದಾರೆ.
ಅಗ್ರಿಕಲ್ಚರ್ :
ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಮೊದಲ ರ್ಯಾಂಕ್, ಸಾಯಿಶ್ ಶರವಣ ಪಂಡಿತ್ ಎರಡನೇ ರ್ಯಾಂಕ್ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ರ್ಯಾಂಕ್ ಪಡೆದಿದ್ದಾರೆ.
ವೆಟರ್ನರಿ ಪ್ರಾಕ್ಟಿಕಲ್ :
ವೆಟರ್ನರಿ ಪ್ರಾಕ್ಟಿಕಲ್ ವಿಭಾಗದಲ್ಲಿ ರಕ್ಷಿತಾ.ವಿ.ಪಿ ಮೊದಲ ರ್ಯಾಂಕ್, ನಂದನ್ ಎರಡನೇ ರ್ಯಾಂಕ್, ಭುವನೇಶ್ವರಿ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಅಗ್ರಿಕಲ್ಚರ್ ಪ್ರಾಕ್ಟಿಕಲ್ :
ಅಗ್ರಿಕಲ್ಚರ್ ಪ್ರಾಕ್ಟಿಕಲ್ ವಿಭಾಗದಲ್ಲಿ ಕೀರ್ತನಾ ಎಂಎಲ್ ಮೊದಲ ರ್ಯಾಂಕ್, ರಕ್ಷಿತಾ ವಿಪಿ ಎರಡನೇ ರ್ಯಾಂಕ್, ಅಶ್ವಿನಿ ಮೂರನೇ ರ್ಯಾಂಕ್ ಪಡೆದಿದ್ದಾರೆ.
ವೆಟರ್ನರಿ :
ವೆಟರ್ನರಿ ವಿಭಾಗದಲ್ಲಿ ಹರೀಶ್ ರಾಜ್ ಡಿ.ವಿ ಮೊದಲ ರ್ಯಾಂಕ್, ಆತ್ರೇಯ ವೆಂಕಟಾಚಲಂ ಎರಡನೇ ರ್ಯಾಂಕ್, ಶಪಲ್ ಎಸ್ ಶೆಟ್ಟಿ ಮೂರನೇ ರ್ಯಾಂಕ್ ಪಡೆದಿದ್ದಾರೆ.







