Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ...

‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ವಾರ್ತಾಭಾರತಿವಾರ್ತಾಭಾರತಿ20 Nov 2026 9:10 PM IST
share
‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜ್ಯ ಸರಕಾರದ ಪ್ರಮುಖ ಕಾರ್ಯಕ್ರಮಗಳು, ಅವುಗಳ ಗುರಿಗಳು ಹಾಗೂ ಪ್ರಗತಿಯನ್ನು ಒಂದೇ ಕಡೆ ತೋರಿಸುವ ಸಾರ್ವಜನಿಕ, ದ್ವಿಭಾಷಾ ಆನ್‍ಲೈನ್ ವೇದಿಕೆ ‘ಸಿಎಂ ಡ್ಯಾಶ್‍ಬೋರ್ಡ್’ (https://cmdashboard.karnataka.gov.in) ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು.

ಶುಕ್ರವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ನವೀಕೃತ ಸಮ್ಮೇಳನ ಸಭಾಂಗಣವನ್ನು ‘ಸಂಗಮ ಸಭಾಂಗಣ’ ಎಂದು ಮರು ನಾಮಕರಣಗೊಳಿಸಿ ಉದ್ಘಾಟಿಸಿದ ಬಳಿಕ ಅವರು ‘ಸಿಎಂ ಡ್ಯಾಶ್‍ಬೋರ್ಡ್’ ಲೋರ್ಕಾಪಣೆಗೊಳಿಸಿದರು.

ಈ ಡ್ಯಾಶ್‍ಬೋರ್ಡ್ ಇಲಾಖೆಗಳ ಕಾರ್ಯವೈಖರಿಯು ಮುಖ್ಯಮಂತ್ರಿಗಳ ಪರಿಶೀಲನೆಗೆ ನೆರವಾಗುವುದರ ಜೊತೆಗೆ, ರಾಜ್ಯದ ಪ್ರತಿಯೊಂದು ನಾಗರಿಕರಿಗೂ ಮುಕ್ತವಾಗಿ ಲಭ್ಯವಾಗಲಿದೆ. ಸರಕಾರದ ‘ಮೊದಲ 100 ದಿನಗಳ ಅಭಿಯಾನಗಳು’ ಅಡಿಯಲ್ಲಿ 10 ವಲಯಗಳ 51 ಅಭಿಯಾನಗಳ ಪ್ರಗತಿಯನ್ನು ಡ್ಯಾಶ್‍ಬೋರ್ಡ್ ನಿಗಾವಹಿಸುತ್ತದೆ. ಅದರಲ್ಲಿ, ರೈತರು ಮತ್ತು ಕೃಷಿ, ಉದ್ಯೋಗ ಮತ್ತು ಯುವ ಸಬಲೀಕರಣ, ಶಾಲಾ ಶಿಕ್ಷಣ, ಕೈಗಾರಿಕೆ ಮತ್ತು ಉತ್ಪಾದನೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ(ಎಐ) ಮತ್ತು ನಾವೀನ್ಯತೆ, ಆರೋಗ್ಯ, ವಾಯು ಮಾಲಿನ್ಯ ನಿಯಂತ್ರಣ, ಬೆಂಗಳೂರಿನಾಚೆಗಿನ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ನಾಗರಿಕ ಸೇವೆಗಳು ಹಾಗೂ 2026ರ ಜೂ.3ರ ಸಚಿವ ಸಂಪುಟದ ತೀರ್ಮಾನಗಳು ಸೇರಿವೆ.

ಪ್ರತಿಯೊಂದು ಅಭಿಯಾನಕ್ಕೂ ಪ್ರತ್ಯೇಕ ಪುಟವಿದ್ದು, ಜವಾಬ್ದಾರಿ ಹೊಂದಿರುವ ಇಲಾಖೆ, ಭೌತಿಕ ಮತ್ತು ಆರ್ಥಿಕ ಗುರಿಗಳು, ಅನುಮೋದನೆ ಮತ್ತು ಆರಂಭದ ದಿನಾಂಕಗಳು, ಗುರಿಗೆ ಎದುರಾಗಿ ತ್ರೈಮಾಸಿಕ ಪ್ರಗತಿ, ಜಿಲ್ಲಾವಾರು ವಿವರಗಳು ಹಾಗೂ ಸರಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳು ಇಲ್ಲಿ ಲಭ್ಯವಿವೆ.

ಡ್ಯಾಶ್‍ಬೋರ್ಡ್‍ನಲ್ಲಿ ನಾಗರಿಕರು ಏನನ್ನು ನೋಡಬಹುದು: 1. ಐದು ಗ್ಯಾರಂಟಿ ಯೋಜನೆಗಳು: ಗೃಹಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಸುಮಾರು 3.3 ಕೋಟಿ ಫಲಾನುಭವಿಗಳಿಗೆ ಈವರೆಗೆ ಖರ್ಚು ಮಾಡಿರುವ 1,57,764 ಕೋಟಿ ರೂ.ಗಳ ಮಾಹಿತಿ ನೋಡಬಹುದು. ಈ ಮಾಹಿತಿ ಪ್ರತಿದಿನ ನವೀಕರಣಗೊಳ್ಳಲಿದೆ.

2. ಪರಿವರ್ತನೆ: 5.35 ಲಕ್ಷ ಕೋಟಿ ರೂ. ಮೌಲ್ಯದ 4.21 ಲಕ್ಷ ಸಾರ್ವಜನಿಕ ಕಾಮಗಾರಿಗಳು ಯಾವ ಇಲಾಖೆಗಳು, ಯಾವ ಜಿಲ್ಲೆ, ಯಾವ ತಾಲೂಕು ಮತ್ತು ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿವೆ ಎಂಬುದರ ಕುರಿತು ನಿಗಾವಹಿಸಲಾಗುತ್ತದೆ. ಇದರಲ್ಲಿ 75,534 ಕೋಟಿ ರೂ. ಮೌಲ್ಯದ 748 ಆರಕ್ಷಿತ ಕಾಮಗಾರಿಗಳು ಸೇರಿವೆ.

3. ನಾಗರಿಕ ಸೇವೆಗಳು: ಸಕಾಲ ಸೇವೆಗಳು (3.30 ಕೋಟಿ ಅರ್ಜಿಗಳು, ಶೇ. 96ರಷ್ಟು ನಿಗದಿತ ಅವಧಿಯೊಳಗೆ ವಿಲೇವಾರಿ), ಪ್ರಜಾ ಸೇವೆ ಕುಂದು ಕೊರತೆ ಪರಿಹಾರ ಹಾಗೂ 4.6 ಲಕ್ಷ ನೌಕರರನ್ನು ಒಳಗೊಂಡ ‘ಕರ್ತವ್ಯ’ ಹಾಜರಾತಿ ವ್ಯವಸ್ಥೆ.

4. ನೇರ ನಗದು ವರ್ಗಾವಣೆ (ಡಿಬಿಟಿ): ಕೆ-ಕಿಸಾನ್, ಸಾಮಾಜಿಕ ಭದ್ರತಾ ಪಿಂಚಣಿಗಳು, ವಿಬಿ-ಜಿ-ರಾಮ್-ಜಿ, ಗ್ರಾಮೀಣ ವಸತಿ(ಆರ್‍ಜಿಆರ್‍ಎಚ್‍ಸಿಎಲ್) ಮತ್ತು ವಿದ್ಯಾರ್ಥಿವೇತನ.

ಮಾಹಿತಿಯನ್ನು ನೇರವಾಗಿ ಇಲಾಖೆಗಳ ತಂತ್ರಾಂಶಗಳಿಂದ ಪಡೆಯಲಾಗುತ್ತಿದ್ದು, ಪ್ರತಿದಿನ ನವೀಕರಿಸಲಾಗುತ್ತದೆ.

ಅಭಿಯಾನದ ಪ್ರಗತಿಯನ್ನು ಇಲಾಖೆಗಳು ‘ಸಿಎಂ ಡೇಟಾ ಪೋರ್ಟಲ್’ ಮೂಲಕ ದಾಖಲಿಸುತ್ತವೆ. ಡ್ಯಾಶ್‍ಬೋರ್ಡ್ ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ, ಮೊಬೈಲ್ ಹಾಗೂ ಕಂಪ್ಯೂಟರ್‍ಗಳಲ್ಲಿಯೂ ಲಭ್ಯವಿದೆ. ಸಿಎಂ ಡ್ಯಾಶ್‍ಬೋರ್ಡ್ ಅನ್ನು ಮುಖ್ಯಮಂತ್ರಿಯ ಕಚೇರಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

‘ಜನರಿಗೆ ನೀಡಿದ ಪ್ರತಿಯೊಂದು ಭರವಸೆ ಮತ್ತು ವ್ಯಯಿಸುವ ಪ್ರತಿಯೊಂದು ರೂಪಾಯಿ ಜನರಿಗೆ ಕಾಣುವಂತಿರಬೇಕು. ಸಿಎಂ ಡ್ಯಾಶ್‍ಬೋರ್ಡ್ ಮೂಲಕ ಪ್ರತಿಯೊಂದು ಅಭಿಯಾನದ ಪ್ರಗತಿಯನ್ನು ಸ್ಪಷ್ಟ ಗುರಿಗಳ ಎದುರು ನಾನು ಪರಿಶೀಲಿಸುತ್ತೇನೆ. ನಾವು ನೋಡುವ ಅಂಕಿಅಂಶಗಳನ್ನೇ ನಾಗರಿಕರೂ ನೋಡಬಹುದು’

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ

Tags

D.K.Shivakumar
share
ವಾರ್ತಾಭಾರತಿ
ವಾರ್ತಾಭಾರತಿ
Next Story
X