ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಈ ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೂ ಮಾಹಿತಿ ಪಡೆಯುತ್ತೇನೆ. ಈ ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.
ಮಲೆನಾಡಿನಲ್ಲೇ ಬರ: ‘ಬರ ಘೋಷಣೆ ಸಂಬಂಧ ಶಾಸಕ ಎಚ್.ಕೆ.ಪಾಟೀಲ್ ಪ್ರತಿನಿಧಿಸುವ ಗದಗ ಜಿಲ್ಲೆಯಲ್ಲೇ ನಾನು ಪ್ರವಾಸ ಮಾಡಿದ್ದೇನೆ. ಪಾಟೀಲರು ಹೇಳಿದ್ದು ಸತ್ಯ. ಮಲೆನಾಡಿನಲ್ಲೇ ಬರ ಬಂದಿದೆ ಎಂದರೆ, ಗದಗದಲ್ಲಿ ಬರ ಇರುವುದಿಲ್ಲವೇ?. ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಈಗಾಗಲೇ 124 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದ 200 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.
ಪ್ರತಿಪಕ್ಷಗಳ ಸದಸ್ಯರು ಕಳೆದ ಅಧಿವೇಶನದ ಹತ್ತು ದಿನದ ಸಮಯ ವ್ಯರ್ಥ ಮಾಡಿದರು. ಅವರಿಗೆ ಸಮಯದ ಬೆಲೆ ತಿಳಿದಿಲ್ಲ. ರಾಜಕಾರಣ ಮಾಡುವುದು ಮಾತ್ರ ಗೊತ್ತು. ನಾಡಿನ ಜನರ ಸಮಸ್ಯೆ ಏನು ಎಂದು ತಿಳಿಯಬೇಕಿತ್ತು. ಸರಕಾರ ಜನರ ದನಿಯಾಗಬೇಕು. ಜನರ ಮಾತಿಗೆ, ಅವರ ಬಾವನೆ ಬೆಲೆ ಕೊಡಬೇಕು ಅಂತ ವಿಶೇಷ ಅಧಿವೇಶನ ಆಯೋಜಿಸಿ ಚರ್ಚೆಗೆ ಕರೆದಿದ್ದೇನೆ ಎಂದರು.






