ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ: ಸಿಎಂ ಶಿವಕುಮಾರ್ ಸ್ಪಷ್ಟನೆ

ಹೊಸದಿಲ್ಲಿ : ಇತ್ತೀಚಿಗೆ ಹೊಸದಿಲ್ಲಿಯಲ್ಲಿ ನಡೆದ ಎಸ್‍ಐಆರ್ ಪ್ರತಿಭಟನೆ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಲಿಲ್ಲ. ಪ್ರತಿಭಟನಾಕಾರರು ಹೆಚ್ಚಾಗಿದ್ದರಿಂದ ಹಿಂದೆ ಬರುತ್ತಿದ್ದ ವಾಹನದಲ್ಲಿ ಹತ್ತುವಂತೆ ಸಲಹೆ ನೀಡಿ ನನ್ನ ಬಗ್ಗೆ ಕಾಳಜಿ ತೋರಿದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಹೊಸದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಿದ್ದಾರೆಂದು ಅಪಪ್ರಚಾರ ನಡೆಸುತ್ತಿದ್ದಾರೆ.ಆದರೆ, ಪ್ರತಿಭಟನೆಯಲ್ಲಿ ಯಾರೂ ಕೂಡ ನನ್ನನ್ನು ತಳ್ಳಲಿಲ್ಲ. ಜನಸಂದಣಿ ಜಾಸ್ತಿ ಇತ್ತು. ಬಿಜೆಪಿ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಹಾಗಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
Next Story




