ಮುಖ್ಯಮಂತ್ರಿಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ವರದಿ ಸಲ್ಲಿಕೆ

ಬೆಂಗಳೂರು : ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆಯ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಮಿತಿಯ ಅಂತಿಮ ವರದಿಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಮಿತಿ ಸದಸ್ಯರಾದ ಎಸ್.ಟಿ.ಬಾಗಲಕೋಟೆ, ಸೂರ್ಯನಾರಾಯಣ ರಾವ್, ಸಂಗೀತಾ ಎನ್.ಕೆ, ಎಲ್.ಕೆ.ಅತೀಕ್, ಸದಸ್ಯ ಕಾರ್ಯದರ್ಶಿ ವಿಶಾಲ್ ಉಪಸ್ಥಿತರಿದ್ದರು.
Next Story





