ಬಿಎಸ್‍ವೈ ಕುರ್ಚಿ ಖಾಲಿ ಮಾಡಿದ ಸ್ಥಿತಿಯೇ ಮೋದಿಗೂ ಬರಲಿದೆ : ಕಾಂಗ್ರೆಸ್

ಬೆಂಗಳೂರು : ‘ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕಾಂಗ್ರೆಸ್ ಇಂದಿಲ್ಲಿ ಪ್ರಶ್ನಿಸಿದೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ’75 ವರ್ಷಗಳ ನಂತರ ಹೊಸಬರಿಗೆ ಅವಕಾಶ ಮಾಡಿಕೊಡಬೇಕು’ ಎನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಆಕಸ್ಮಿಕವಲ್ಲ’ ಎಂದು ಪ್ರತಿಕ್ರಿಯಿಸಿದೆ.
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಣ್ಣೀರು ಹಾಕಿಕೊಂಡು ಕುರ್ಚಿ ಖಾಲಿ ಮಾಡಿದ ದುಃಸ್ಥಿತಿಯೇ ನರೇಂದ್ರ ಮೋದಿ ಅವರಿಗೂ ಬರಲಿದೆ ಎಂಬುದರ ಸ್ಪಷ್ಟ ಸಂದೇಶ ಎಂದು ಕಾಂಗ್ರೆಸ್ ತಿಳಿಸಿದೆ.
‘ಎಲ್.ಕೆ. ಅಡ್ವಾಣಿ, ಎಂ.ಎಂ.ಜೋಷಿ, ಅಟಲ್ ಬಿಹಾರಿ ವಾಜಪೇಯಿ ಅವರಂತೆ ಪ್ರಧಾನಿ ನರೇಂದ್ರ ಮೋದಿಯವರು ಮೂಲೆಗುಂಪಾಗುವ ದಿನ ಸಮೀಪಿಸುತ್ತಿದೆ ಎಂಬ ಸಂಘ(ಆರೆಸ್ಸೆಸ್)ದ ನಿಖರ ಭವಿಷ್ಯ’ ಎಂದು ಕಾಂಗ್ರೆಸ್ ವಿಶ್ಲೇಷಣೆ ಮಾಡಿದೆ.
"75ರ ನಂತರ ಹೊಸಬರಿಗೆ ಅವಕಾಶ ಮಾಡಿಕೊಡಬೇಕು" ಎನ್ನುವ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಆಕಸ್ಮಿಕವಲ್ಲ.
— Karnataka Congress (@INCKarnataka) July 12, 2025
ಕರ್ನಾಟಕದಲ್ಲಿ ಮಾಜಿ ಸಿಎಂ @BSYBJP ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಣ್ಣೀರು ಹಾಕಿಕೊಂಡು ಕುರ್ಚಿ ಖಾಲಿ ಮಾಡಿದ ದುಃಸ್ಥಿತಿಯೇ @narendramodi ಅವರಿಗೂ ಬರಲಿದೆ ಎಂಬುದರ ಸ್ಪಷ್ಟ ಸಂದೇಶ!
ಎಲ್.ಕೆ ಅಡ್ವಾಣಿ,…







