Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ದಾವಣಗೆರೆ ದಕ್ಷಿಣ ಉಪಚುನಾವಣೆ :...

ದಾವಣಗೆರೆ ದಕ್ಷಿಣ ಉಪಚುನಾವಣೆ : ʼವಾರ್ತಾಭಾರತಿʼ - 'ಸಂಕಲ್ಪ್' ಮತದಾನೋತ್ತರ ಸಮೀಕ್ಷೆ ಹೇಳುವುದೇನು?

ವಾರ್ತಾಭಾರತಿವಾರ್ತಾಭಾರತಿ29 April 2026 7:30 PM IST
share
ದಾವಣಗೆರೆ ದಕ್ಷಿಣ ಉಪಚುನಾವಣೆ : ʼವಾರ್ತಾಭಾರತಿʼ - ಸಂಕಲ್ಪ್  ಮತದಾನೋತ್ತರ ಸಮೀಕ್ಷೆ ಹೇಳುವುದೇನು?

ವಾರ್ತಾಭಾರತಿ ಹಾಗು ಬೆಂಗಳೂರಿನ ರಾಜಕೀಯ ಸಂಶೋಧನಾ ಸಂಸ್ಥೆ 'ಸಂಕಲ್ಪ್' ನಡೆಸಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾನೋತ್ತರ ಸಮೀಕ್ಷೆಯಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು ಇಲ್ಲಿವೆ:

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಈ ಬಾರಿಯೂ ಬಿಜೆಪಿಗಿಂತ ಮುಂದಿದ್ದರೂ, 2023 ರ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ ಮತಗಳಲ್ಲಿ ಸುಮಾರು 25% ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಅದರ ಮುನ್ನಡೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಲಿದೆ. ಆದರೆ ಬಿಜೆಪಿ 2023 ರಲ್ಲಿ ಗಳಿಸಿದ್ದ ಮತಗಳಲ್ಲಿ 95% ವನ್ನು ಹಾಗೇ ಉಳಿಸಿಕೊಂಡಿದೆ. ಜೊತೆಗೆ ಮುಸ್ಲಿಂ ಮತದಾರರ ವ್ಯಾಪಕ ಆಕ್ರೋಶವನ್ನೂ ಕಾಂಗ್ರೆಸ್ ಎದುರಿಸಿದೆ. ಹಾಗಾಗಿ ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಉಪಚುನಾವಣೆ ಸುಲಭದ ತುತ್ತಲ್ಲ.

ಕಾಂಗ್ರೆಸ್ ಕಳೆದುಕೊಳ್ಳುವ ಮತಗಳಲ್ಲಿ ಹೆಚ್ಚಿನವು ಬಿಜೆಪಿಗೆ ಹೋಗಿದೆ. ಅದರಲ್ಲಿ ಒಂದಷ್ಟು ಪ್ರಮಾಣವನ್ನು ಎಸ್ ಡಿ ಪಿ ಐ ಪಡೆದುಕೊಂಡಿದೆ. ಕಾಂಗ್ರೆಸ್ ಕಳೆದುಕೊಳ್ಳುವ 17% ಮತಗಳು ಬಿಜೆಪಿ ಕಡೆ ಹೋದರೆ, ಕಾಂಗ್ರೆಸ್ ನಿಂದ ದೂರವಾಗುವ 7% ಮತಗಳನ್ನು ಎಸ್ ಡಿ ಪಿ ಐ ಪಡೆಯಲಿದೆ.

2023 ರಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ 58% ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ 48.7% ಮತಗಳನ್ನು ಪಡೆಯುವ ಸಾಧ್ಯತೆ ಇದೆ. 2023 ರಲ್ಲಿ 39% ಮತಗಳನ್ನು ಪಡೆದಿದ್ದ ಬಿಜೆಪಿಯ ಮತಗಳಿಕೆ ಪ್ರಮಾಣ ಈ ಉಪಚುನಾವಣೆಯಲ್ಲಿ 43.5% ಕ್ಕೆ ತಲುಪಬಹುದು. 2023 ರಲ್ಲಿ ಕೇವಲ 0.9% ಮತಗಳನ್ನು ಪಡೆದ ಎಸ್ ಡಿ ಪಿ ಐ ಈ ಬಾರಿ 5.7% ದಷ್ಟು ಮತಗಳನ್ನು ಬಾಚಿಕೊಳ್ಳುವ ಸಾಧ್ಯತೆ ಇದೆ. ಟಿಕೆಟ್ ಹಂಚಿಕೆ ಹಾಗು ಮುಸ್ಲಿಮರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಕುರಿತ ಆ ಸಮುದಾಯದ ವ್ಯಾಪಕ ಅಸಮಾಧಾನ ಇಲ್ಲಿ ಕಾಂಗ್ರೆಸ್ ಗೆ ನಷ್ಟವಾಗಿ ಎಸ್ ಡಿ ಪಿ ಐ ಗೆ ಲಾಭ ತರಲಿದೆ ಎಂದು ಹೇಳುತ್ತಿದೆ ಸರ್ವೇ. ಪಕ್ಷೇತರರು, ನೋಟಾ ಕಡೆ ಒಟ್ಟಿಗೆ 2.1% ದಷ್ಟು ಮತಗಳು ಹೋಗಬಹುದು.

ಪುರುಷರಲ್ಲಿ 47.0% ಮತದಾರರು ಕಾಂಗ್ರೆಸ್ ಕಡೆ ಹೋದರೆ 44.2% ಪುರುಷರು ಬಿಜೆಪಿಯನ್ನು ಬೆಂಬಲಿಸಿರಬಹುದು. ಪುರುಷ ಮತದಾರರಲ್ಲಿ 6.4% ರಷ್ಟು ಮಂದಿ ಎಸ್ ಡಿ ಪಿ ಐ ಯನ್ನು ಬೆಂಬಲಿಸಿದ್ದಾರೆ. ಇತರರಿಗೆ ಪುರುಷರಿಂದ 2.4% ಮತಗಳು ಹೋಗಿರಬಹುದು. ಮಹಿಳೆಯರಲ್ಲಿ 53.0% ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದು, 41.6% ಮಹಿಳಾ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಮಹಿಳೆಯರಲ್ಲಿ 3.9% ಮತದಾರರು ಎಸ್ ಡಿ ಪಿ ಐ ಗೆ ಮತ ನೀಡಿದ್ದಾರೆ.

18 ರಿಂದ 25 ವರ್ಷದ ಮತದಾರರ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಭಾರೀ ಹಣಾಹಣಿ ನಡೆದಿದೆ. 45.5% ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ 45.9% ಮಂದಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. 18 ರಿಂದ 25 ವರ್ಷದ 6.6% ಮತದಾರರು ಎಸ್ ಡಿ ಪಿ ಐ ಗೆ ಮತ ಹಾಕಿದ್ದಾರೆ. ಯುವ ಮುಸ್ಲಿಂ ಮತದಾರರು ಕಾಂಗ್ರೆಸ್ ಬಿಟ್ಟು ಎಸ್ ಡಿ ಪಿ ಐ ಕಡೆ ಹೋಗಿರುವುದನ್ನು ಇದು ತೋರಿಸುತ್ತದೆ. 26 ರಿಂದ 40 ವರ್ಷದವರು ಒಟ್ಟು ಮತದಾರರಲ್ಲಿ ಅತಿದೊಡ್ಡ ಗುಂಪು. ಇವರಲ್ಲಿ 47.4% ಮಂದಿ ಕಾಂಗ್ರೆಸ್ ಜೊತೆ ಹೋಗಿದ್ದರೆ, 43.5% ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ. 26 ರಿಂದ 40 ವರ್ಷದ ಮತದಾರರಲ್ಲಿ 6.4% ಮಂದಿ ಎಸ್ ಡಿ ಪಿ ಐ ಯನ್ನು ಬೆಂಬಲಿಸಿದ್ದಾರೆ. 41 ರಿಂದ 60 ವರ್ಷದ ಮತದಾರರಲ್ಲಿ ಕಾಂಗ್ರೆಸ್ ಶಾಮನೂರು ಹೆಸರಿನ ಅನುಕಂಪದ ಮತಗಳನ್ನು ಹೆಚ್ಚು ಗಳಿಸಿರುವ ಸಾಧ್ಯತೆ ಇದೆ. ಆ ವರ್ಗದಲ್ಲಿ 52.1% ಮತಗಳನ್ನು ಕಾಂಗ್ರೆಸ್ ಪಡೆದಿದೆ, ಅದೇ ವರ್ಗದಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣ 41.7% ಇರಬಹುದು. ಎಸ್ ಡಿ ಪಿ ಐ ಗೆ 41ರಿಂದ 60 ವರ್ಷದ ಮತದಾರರಲ್ಲಿ 4.7% ಮಂದಿ ಬೆಂಬಲಿಸಿದ್ದಾರೆ. 60 ವರ್ಷ ದಾಟಿದ ಮತದಾರರಲ್ಲಿ ಮಾತ್ರ ಬಿಜೆಪಿಯ ಬೆಂಬಲ ಹೆಚ್ಚಿದೆ. ಅಲ್ಲಿ 51.0% ಮತಗಳು ಬಿಜೆಪಿಗೆ ಬಿದ್ದಿವೆ. 44.4% ಮತಗಳು ಕಾಂಗ್ರೆಸ್ ಗೆ ಬಂದಿವೆ. ಎಸ್ ಡಿ ಪಿ ಐ ಗೆ ಅಲ್ಲಿ ಬಂದ ಮತಗಳ ಪ್ರಮಾಣ 3.7%.

2023 ರಿಂದ 2026 ರವರೆಗೆ ಮತಗಳು ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿವೆ ಎಂದು ನೋಡಿದರೆ ಕಾಂಗ್ರೆಸ್ 2023 ರ ಚುನಾವಣೆಯಲ್ಲಿ ಗಳಿಸಿದ್ದ 75% ಮತಗಳನ್ನು ಮಾತ್ರ ಉಳಿಸಿಕೊಂಡಿದೆ. ಅದರ 17% ಮತಗಳು ಬಿಜೆಪಿ ಕಡೆ ಹೋಗಿವೆ. ಈ 17% ದಲ್ಲಿ 50% ದಲಿತರು, 27% ಇತರರು, 11% ಲಿಂಗಾಯತರು ಹಾಗು 12% ಕುರುಬರು . ಕಾಂಗ್ರೆಸ್ ಕಳಕೊಂಡ 7% ಮತಗಳು ಎಸ್ ಡಿ ಪಿ ಐ ಗೆ ಹೋಗಿವೆ. ಇದು ಸ್ಪಷ್ಟವಾಗಿ ಮುಸ್ಲಿಮ್ ಮತದಾರರ ಅಸಮಾಧಾನದ ಪರಿಣಾಮ. ಕಾಂಗ್ರೆಸ್ ಕಳಕೊಂಡ ಸುಮಾರು ಒಂದು ಶೇಕಡಾ ಮತ ಇತರರಿಗೆ ಹೋಗಿರಬಹುದು. ಅಂದರೆ 2023 ರಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ ಪ್ರತಿ ನೂರರಲ್ಲಿ 25 ಮಂದಿ ಈ ಬಾರಿ ಬೇರೆ ಪಕ್ಷದ ಕಡೆ ಹೋಗಿದ್ದಾರೆ. ಈ ಭಾರೀ ಕುಸಿತ ಕಾಂಗ್ರೆಸ್ ಗೆ ದೊಡ್ಡ ಎಚ್ಚರಿಕೆ. ಇದಕ್ಕೆ ಹೋಲಿಸಿದರೆ ಬಿಜೆಪಿ 2023 ರಲ್ಲಿ ಗಳಿಸಿದ ಮತಗಳಲ್ಲಿ 95% ಮತಗಳನ್ನು ಉಳಿಸಿಕೊಂಡಂತೆ ಕಾಣುತ್ತಿದೆ. ಅದರ ಕೇವಲ 5% ಮತಗಳು ಕಾಂಗ್ರೆಸ್ ಕಡೆ ಹೋಗಿರಬಹುದು. ಆ 5% ದಲ್ಲಿ 25% ದಲಿತರು , 33% ಲಿಂಗಾಯತರು, 25% ಕುರುಬರು ಹಾಗು 17% ಇತರರು. ಕಾಂಗ್ರೆಸ್ ನ 7% ಮತಗಳು ಎಸ್ ಡಿ ಪಿ ಐ ಗೆ ಹೋಗಿರುವಾಗ ಬಿಜೆಪಿಯಿಂದ ಯಾವುದೇ ಮತಗಳು ಎಸ್ ಡಿ ಪಿ ಐ ಗೆ ಹೋಗಿಲ್ಲ.

► ಕಾಂಗ್ರೆಸ್ ಗೆ ಇವುಗಳಿಂದ ಲಾಭ

- ಶಾಮನೂರು ನಿಧನದ ಅನುಕಂಪ,

- ಆಡಳಿತ ಪಕ್ಷದ ಕಡೆ ಜನರ ಒಲವು,

- ಮಲ್ಲಿಕಾರ್ಜುನ್ - ಪ್ರಭಾ ದಂಪತಿ ಪ್ರಭಾವ

- ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು

► ಬಿಜೆಪಿಗೆ ಇವುಗಳಿಂದ ಲಾಭ

- ಕಾಂಗ್ರೆಸ್ ಸರಕಾರದ ವಿರುದ್ಧ ಆಡಳಿತ ವಿರೋಧಿ ಭಾವನೆ

- ಮುಸ್ಲಿಮರ ಆಕ್ರೋಶ

- ಬಿಜೆಪಿಯಿಂದ ದಲಿತ ಅಭ್ಯರ್ಥಿ

ಮುಸ್ಲಿಮರ ಆಕ್ರೋಶದ ನೇರ ಲಾಭ ಎಸ್ ಡಿ ಪಿ ಐ ಗೆ ಆಗಿದ್ದರೆ ಕಾಂಗ್ರೆಸ್ ಓಟು ಕಳಕೊಂಡಿದ್ದು ಪರೋಕ್ಷವಾಗಿ ಬಿಜೆಪಿ ಲಾಭ ಮಾಡಿಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಮಲ್ಲಿಕಾರ್ಜುನ 43% ರಿಂದ 51% ಮತಗಳನ್ನು ಪಡೆಯುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿಯ ಶ್ರೀನಿವಾಸ್ ಟಿ ದಾಸಕರಿಯಪ್ಪ 42% ರಿಂದ 50% ಹಾಗು ಎಸ್ ಡಿ ಪಿ ಐ ನ ಅಫ್ಸರ್ ಕೊಡ್ಲಿಪೇಟೆ ಸುಮಾರು 6% ಮತಗಳನ್ನು ಪಡೆಯಬಹುದು. ಇತರರು 1% ಮತಗಳಿಸುವ ಸಾಧ್ಯತೆ ಇದೆ.

2023 ರಲ್ಲಿ 27,888 ಮತಗಳ ಭಾರೀ ಅಂತರದಿಂದ ಗೆದ್ದ ಕಾಂಗ್ರೆಸ್ ಈ ಬಾರಿ ಕೇವಲ 1500 ರಿಂದ 2600 ಮತಗಳ ಅಂತರದಿಂದ ಮುಂದಿರುವಂತೆ ಕಾಣುತ್ತಿದೆ. ಅಂತರ ತೀರಾ ಸಣ್ಣದಿರುವುದರಿಂದ ಅಚ್ಚರಿಯ ಫಲಿತಾಂಶದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Tags

Davanagere South By Election 2026
share
ವಾರ್ತಾಭಾರತಿ
ವಾರ್ತಾಭಾರತಿ
Next Story
X