ದ್ವೇಷದ ತಯಾರಿಯಲ್ಲಿ ತೊಡಗಿರುವ ಬಲಪಂಥೀಯ ಸಂಘಟನೆಗಳ ವಿರುದ್ಧ ಕ್ರಮಕ್ಕೆ ʼಬಹುತ್ವ ಕರ್ನಾಟಕʼ ಒತ್ತಾಯ

ಬೆಂಗಳೂರು, ಆ.4: ಸುಳ್ಳು ಸುದ್ದಿಗಳ ಮೂಲಕ ದ್ವೇಷದ ತಯಾರಿಯಲ್ಲಿ ತೊಡಗಿರುವ ಬಲಪಂಥೀಯ ಸಂಘಟನೆಗಳ ವಿರುದ್ಧ ಕ್ರಿಮಿನಲ್ ಕ್ರಮವನ್ನು ಕೈಗೊಳ್ಳಬೇಕೆಂದು ಬಹುತ್ವ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮೇಣದ ಬತ್ತಿ ಹಿಡಿದು ಧರಣಿ ನಡೆಸಿದ ಪ್ರತಿಭಟನಾಕಾರರು, ಹರಿಯಾನದಲ್ಲಿ ಬಲಪಂಥೀಯ ಸಂಘಟನೆಗಳ ಸದಸ್ಯರು ಬಹಿರಂಗವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾರೆ ಮತ್ತು ಬೆಂಕಿ ಮತ್ತು ಹಿಂಸಾಚಾರದಲ್ಲಿ ತೊಡಗುತ್ತಾರೆ. ಇವರ ವಿರುದ್ಧ ಸ್ಥಳೀಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ನಡೆಯುತ್ತಿರುವ ದ್ವೇಷದ ಅಪರಾಧಗಳ ಹೊಣೆಯನ್ನು ಪ್ರಧಾನ ಮಂತ್ರಿಯೇ ಹೊರಬೇಕು ಮತ್ತು ಅದಕ್ಕಾಗಿ ಕ್ಷಮೆಯಾಚಿಸಬೇಕು. ಸಾಂವಿಧಾನಿಕ ಕರ್ತವ್ಯದಲ್ಲಿ ವಿಫಲರಾಗಿರುವ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದ್ವೇಷದÀ ಅಪರಾಧಗಳು ಮತ್ತು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬೇಕು ಮತ್ತು ದ್ವೇಷದ ಅಪರಾಧಗಳಿಗೆ ಸಂಬಂಧಿಸಿದಂತೆ ತಡೆಗಟ್ಟುವ, ಪರಿಹಾರ ಮತ್ತು ದಂಡನೆಯ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಶಹೀನ್ ಅಬ್ದುಲ್ಲಾ ಪ್ರಕರಣದಲ್ಲಿ ಮತ್ತು ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಷಮೆಯಾಚಿಸಬೇಕು, ಕೂಡಲೇ ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಬೇಕು ಮತ್ತು ಎಲ್ಲಾ ರೈಲು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈಲ್ವೇ ಮತ್ತು ಪೆÇಲೀಸರು ಹತ್ಯೆಗಳ ದ್ವೇಷದ ಅಪರಾಧದ ಅಂಶವನ್ನು ತನಿಖೆ ಮಾಡಬೇಕು ಮತ್ತು ಎಫ್‍ಐಆರ್‍ಗೆ ಸೆಕ್ಷನ್ 153 ಎ, 505(2) ಅನ್ನು ಸೇರಿಸಬೇಕು ಮತ್ತು ತನಿಖೆ ನಡೆಸಬೇಕು. ಗುಂಪು ಹಿಂಸಾಚಾರದ ಕುರಿತಾದ ತೆಹಸೀನ್ ಪೂನಾವಾಲ್ಲಾ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಗುಂಪು ಹಿಂಸಾಚಾರದ ಬಗ್ಗೆ ಆದೇಶಗಳನ್ನು ನೀಡಿತ್ತು. ಹರಿಯಾಣ ಸರಕಾರವು ಈ ಆದೇಶಗಳನ್ನು ಜಾರಿಗೆ ತಂದಿಲ್ಲ ಆದ್ದರಿಂದ ಅವುಗಳನ್ನು ತಿರಸ್ಕಾರ ಮಾಡಬೇಕು ಎಂದು ಪ್ರತಿಭಟನಾಕಾರರು ಹೇಳಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹರಿಯಾನಾದ ಹಿಂಸಾಚಾರದ ಸ್ವಯಂಪ್ರೇರಿತ ಅರಿವು ತೆಗೆದುಕೊಳ್ಳಬೇಕು ಮತ್ತು ಅದರ ತನಿಖೆಯ ಮೇಲ್ವಿಚಾರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು. ಧರಣಿಯಲ್ಲಿ ವಕೀಲ ವಿನಯ್‍ಶ್ರೀನಿವಾಸ್ ಸೇರಿದಂತೆ ಬಹುತ್ವ ಕರ್ನಾಟಕ ಸಂಘಟನೆಯ ಸದಸ್ಯರು ಇದ್ದರು.







