ʼಧರ್ಮಸ್ಥಳ ಪ್ರಕರಣʼ ಎನ್ಐಎ ತನಿಖೆಗೆ ಒಪ್ಪಿಸಿ : ಅಶ್ವತ್ಥನಾರಾಯಣ್

ಅಶ್ವತ್ಥನಾರಾಯಣ್
ಬೆಂಗಳೂರು, ಆ.24: ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಲಾಗುತ್ತಿದ್ದು, ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಪಿತೂರಿಗಳನ್ನು ಬಯಲಿಗೆಳೆಯುವ ಕೆಲಸಗಳಾಗಬೇಕು. ಎಸ್ಐಟಿ ರಚನೆ ಆದಾಗ ಸಾಕಷ್ಟು ಅನುಮಾನ ಸೃಷ್ಟಿಯಾಗಿತ್ತು. ಆದರೂ ತನಿಖೆ ಮುಗಿದು ಸತ್ಯ ಹೊರಬರಲಿ, ಅಲ್ಲಿಯವರೆಗೂ ನಾವು ಕಾಯುತ್ತೇವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರದ ಹಿಂದೆ ಯಾರ ಕೈವಾಡವಿದೆ ಎಂಬುವುದು ಬಯಲಾಗಬೇಕು ಎಂದರು.
ಬಿಜೆಪಿಯವರು ಮೊದಲು ಮಾತನಾಡಿಲ್ಲ, ಈಗ ಮಾತನಾಡುತ್ತಿದ್ದಾರೆ ಎನ್ನುವುದುದು ಸರಿಯಲ್ಲ. ನಾವು ಪ್ರಾರಂಭದಿಂದಲೂ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೇವೆ ಎಂದ ಅವರು, ತನಿಖೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಅನಾಮಿಕ ವ್ಯಕ್ತಿ ಮೇಲೆ ಅನುಮಾನ, ಎಲ್ಲ ರೀತಿಯ ಪ್ರಶ್ನೆಗಳಿವೆ ಎಂದು ಉಲ್ಲೇಖಿಸಿದರು.
Next Story





