ಧರ್ಮಸ್ಥಳ ದೂರು ಪ್ರಕರಣ | ಎಸ್‌ಐಟಿಗೆ ಹೆಚ್ಚುವರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿಯೋಜನೆ
ನೇಮಕಗೊಂಡ ಅಧಿಕಾರಿಗಳು ಯಾರೆಲ್ಲ?: ಇಲ್ಲಿದೆ ವಿವರ

ಬೆಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಹೆಚ್ಚುವರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶವನ್ನು ಹೊರಡಿಸಿದ್ದಾರೆ.
ರಾಜ್ಯ ಸರಕಾರ ರವಿವಾರ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸದಸ್ಯರಾಗಿದ್ದಾರೆ. ಇದೀಗ ಎಸ್‌ಐಟಿಗೆ ಹೆಚ್ಚುವರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಎಸ್‌ಐಟಿಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು :
ನಿಯೋಜಿತ ಅಧಿಕಾರಿ-ಸಿಬ್ಬಂದಿಯ ವಿವರ
ಸಿ.ಎ.ಸೈಮನ್ - ಎಸ್‌ಪಿ, ಡಿಸಿಆರ್ ಇ, ಮಂಗಳೂರು,
ಲೋಕೇಶ್ ಎ.ಸಿ - ಡಿಎಸ್‌ಪಿ, ಸಿಇಎನ್ ಪಿಎಸ್, ಉಡುಪಿ,
ಮಂಜುನಾಥ್- ಡಿಎಸ್‌ಪಿ, ಸಿಇಎನ್ ಪಿಎಸ್, ದ.ಕ.
ಮಂಜುನಾಥ್- ಪಿಐ, ಸಿಎಸ್‌ಪಿ,
ಸಂಪತ್ ಇ.ಸಿ.- ಪಿಐ, ಸಿಎಸ್‌ಪಿ,
ಕುಸುಮಾಧರ್ ಕೆ.- ಪಿಐ, ಸಿಎಸ್‌ಪಿ,
ಮಂಜುನಾಥ್ ಗೌಡ- ಪಿಐ ಶಿರಸಿ ಗ್ರಾಮಾಂತರ, ಉತ್ತರ ಕನ್ನಡ,
ಸವಿತ್ರು ತೇಜ್ ಪಿ.ಡಿ.- ಸಿಪಿಐ, ಬೈಂದೂರು,
ಉಡುಪಿ, ಕೋಕಿಲಾ ನಾಯಕ್- ಪಿಎಸ್ಸೈ, ಸಿಎಸ್‌ಪಿ,
ವಯ್ಲೆಟ್ ಫೆಮಿನಾ- ಪಿಎಸ್ಸೈ, ಸಿಎಸ್‌ಪಿ,
ಶಿವಶಂಕರ್- ಪಿಎಸ್ಸೈ, ಸಿಎಸ್‌ಪಿ,
ರಾಜ್ ಕುಮಾರ್ ಉಕ್ಕಲಿ- ಪಿಎಸ್ಸೈ ಶಿರಸಿ ಎನ್ಎಂ ಪಿಎಸ್, ಉತ್ತರ ಕನ್ನಡ,
ಸುಹಾಸ್ ಆರ್.- ಪಿಎಸ್ಸೈ, ತನಿಖೆ, ಅಂಕೋಲಾ ಪಿ.ಎಸ್., ಉತ್ತರ ಕನ್ನಡ ,
ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್ಸೈ, ತನಿಖೆ, ಮುಂಡಗೋಡ ಪಿಎಸ್, ಉತ್ತರ ಕನ್ನಡ,
ಗುಣಪಾಲ್ ಜೆ. - ಪಿಎಸ್ಸೈ, ಮೆಸ್ಕಾಂ, ಮಂಗಳೂರು,
ಸುಭಾಷ್ ಕಾಮತ್- ಎಎಸ್ಸೈ, ಉಡುಪಿ ಟೌನ್ ಪಿಎಸ್,
ಹರೀಶ್ ಬಾಬು- ಸಿಎಚ್ ಸಿ 91, ಕಾಪು ಪಿಎಸ್ ಉಡುಪಿ,
ಪ್ರಕಾಶ್- ಸಿಎಚ್ ಸಿ 1140, ಮಲ್ಪೆ ವೃತ್ತ ಕಚೇರಿ, ಉಡುಪಿ,
ನಾಗರಾಜ್- ಸಿಎಚ್ ಸಿ 1177, ಕುಂದಾಪುರ ಟೌನ್ ಪಿಎಸ್, ಉಡುಪಿ ,
ದೇವರಾಜ್- ಸಿಎಚ್ ಸಿ 359, ಎಫ್ಎಂಎಸ್, ಚಿಕ್ಕಮಗಳೂರು







