ನಾಳೆಯಿಂದ(ಸೆ.20) ಶಾಲಾ ಮಕ್ಕಳಿಗೆ ʼದಸರಾ ರಜೆʼ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.19 : ನಾಳೆಯಿಂದ(ಸೆ.20) ರಾಜ್ಯಾದ್ಯಂತ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭವಾಗಿದ್ದು, ಅ.7ರ ವರೆಗೆ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆಯು ಮಾಹಿತಿ ನೀಡಿದೆ.
ಇಲಾಖೆಯು 2025-26ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ರಜೆಗಳು ಮತ್ತು ಶಾಲಾ ಚಟುವಟಿಕೆಗಳ ಸಂಪೂರ್ಣ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಮಾರ್ಗದರ್ಶಿಯ ಪ್ರಕಾರ ದಸರಾ ರಜೆ ನೀಡಲಾಗಿದೆ. ಅ.8ರಿಂದ ಶಾಲೆಗಳ ಎರಡನೆ ಅವಧಿಯ ತರಗತಿಗಳು ಆರಂಭವಾಗಲಿದೆ. ಈ ಎರಡನೆ ಅವಧಿಯು 2026ರ ಎ.10ರ ವರೆಗೆ ಮುಂದುವರಿಯಲಿದೆ.
Next Story





