ನಕಲಿ ಔಷಧಿ ದಂಧೆ: 16 ಔಷಧ ಪರವಾನಗಿ ರದ್ದು, 8 ಪರವಾನಗಿ ಅಮಾನತು

ಸಾಂದರ್ಭಿಕ ಚಿತ್ರ | Image by 8photo on Magnific
ಬೆಂಗಳೂರು : ಬಿಡದಿ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ನಕಲಿ ಔಷಧಿ ಮರುಪ್ಯಾಕಿಂಗ್ ಮತ್ತು ಮರುಲೇಬಲಿಂಗ್ ದಂಧೆಯ ತನಿಖೆಯ ಮುಂದುವರಿದ ಭಾಗವಾಗಿ ಔಷಧಿಗಳ ಮಾರಾಟ ಮತ್ತು ಸರಬರಾಜಿನಲ್ಲಿ ಭಾಗಿಯಾಗಿದ್ದ 16 ಔಷಧ ಪರವಾನಗಿಗಳನ್ನು ರದ್ದುಪಡಿಸಲಾಗಿದ್ದು, 8 ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರದ್ದುಪಡಿಸಲಾದ ಪರವಾನಗಿಗಳ ಪೈಕಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಸಗಟು ಹಾಗೂ ಚಿಲ್ಲರೆ ಔಷಧ ಮಳಿಗೆಗಳು ಸೇರಿವೆ. ಅವೆಸ್ಕೊ ಹೆಲ್ತ್ ಕೇರ್, ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ, ಬೆಂಗಳೂರ್ಸ್ ಸ್ಪೆಷಾಲಿಟಿ ಫಾರ್ಮಾ, ಪಟೇಲ್ ಮೇದಿ ಟ್ರೇಡ್, ರಾಜರಾಜೇಶ್ವರಿ ಫಾರ್ಮಾ, ಎನ್.ಎಸ್.ಫಾರ್ಮಾ, ಸೂರ್ಯ ಸ್ಪೆಷಾಲಿಟಿ ಫಾರ್ಮಾ, ಎಸ್ಡಬ್ಲ್ಯೂಎಸ್ ಫಾರ್ಮಾ, ಕೃಪಾ ಹೆಲ್ತ್ ಕೇರ್ ಸೇರಿದಂತೆ ಒಟ್ಟು 16 ಸಂಸ್ಥೆಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ.
ಅಮಾನತುಗೊಳಿಸಲಾದ 8 ಪರವಾನಗಿಗಳಲ್ಲಿ ‘ಮೆಡ್ ಫಾರ್ಮಾ, ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್, ಸಾಗರ್ ಫಾರ್ಮಾ(ಯುನಿಟ್-2) ವಿವಾಂತ ಫಾರ್ಮಾಸಿಯುಟಿಕಲ್ಸ್, ಮಾರುತಿ ಮೆಡಿಕಲ್ಸ್, ವಿವಾ ಫಾರ್ಮಾ, ಹೈ-5 ಫಾರ್ಮಾ ಹಾಗೂ ಫೈಝರ್ ಲಿ.’ ಕಂಪೆನಿಗಳು ಸೇರಿವೆ.
ನಕಲಿ ಔಷಧಿಗಳ ಮಾರಾಟ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಮುಂದುವರಿದಿದ್ದು, ವಶಪಡಿಸಿಕೊಂಡ ಔಷಧಿಗಳ ಬ್ಯಾಚ್ಗಳನ್ನು ಎಫ್ಡಿಎ ಪೋರ್ಟಲ್ನಲ್ಲಿ ಬ್ಲಾಕ್ ಮಾಡಲಾಗಿದೆ. ಅವುಗಳ ಮಾದರಿಗಳನ್ನು ರಾಸಾಯನಿಕ ಸಂಯೋಜನೆ, ಶುದ್ಧತೆ ಹಾಗೂ ಸಾಮಥ್ರ್ಯ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.






