ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ | ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಜನಾರ್ದನ ರೆಡ್ಡಿ | PC : NDTV
ಗಂಗಾವತಿ: ಓಬಲಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಮತ್ತು ಶಾಸಕ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಶಿಕ್ಷೆಯನ್ನು ತಡೆಹಿಡಿದು ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿಗಳಾದ ಜನಾರ್ಧನಾರೆಡ್ಡಿ ಸೇರಿದಂತೆ ಅಲಿಖಾನ್, ಬಿ.ಬಿ.ಶ್ರೀನಿವಾಸರೆಡ್ಡಿ ಮತ್ತು ರಾಜಗೋಪಾಲರೆಡ್ಡಿ ಅವರಿಗೆ ಜಾಮೀನು ನೀಡಿದ್ದು, ಸಿಬಿಐ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತು ಮಾಡಿದೆ.
ಜನಾರ್ಧನಾರೆಡ್ಡಿ ಅವರಿಗೆ ದೇಶಬಿಟ್ಟು ಹೋಗದಂತೆ ಹಾಗೂ ಹತ್ತು ಲಕ್ಷ ರೂ.ಗಳ ಬಾಂಡ್ ನೀಡುವಂತೆ ಷರತ್ತುಬದ್ಧ ಜಾಮೀನು ನೀಡಿದೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಹೈದರಾಬಾದ್ನಲ್ಲಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯ ಮೇ 6ರಂದು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸಿಬಿಐ ನ್ಯಾಯಾಲಯದ ತೀರ್ಪನ್ನು ತಡೆಹಿಡಿದ ತೆಲಂಗಾಣ ಹೈಕೋರ್ಟ್ ಇದೀಗ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
Next Story