Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ನಾನು ಸಾಧಾರಣ ಬಡ ಕುಟುಂಬದಿಂದ ಬಂದವನು,...

ನಾನು ಸಾಧಾರಣ ಬಡ ಕುಟುಂಬದಿಂದ ಬಂದವನು, ಜೀವನ ನಿರ್ವಹಣೆ ಹೇಗಿರುತ್ತದೆ ಎಂಬುದು ಗೊತ್ತಿದೆ: ಪ್ರಧಾನಿ ಮೋದಿ

►"ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಯುತ್ತಿದೆ" ►"ಬೆಂಗಳೂರನ್ನು ಟೆಕ್ ಸಿಟಿಯಿಂದ ಟ್ಯಾಂಕರ್ ಸಿಟಿ ಮಾಡಲಾಗಿದೆ"

ವಾರ್ತಾಭಾರತಿವಾರ್ತಾಭಾರತಿ20 April 2024 8:26 PM IST
share
ನಾನು ಸಾಧಾರಣ ಬಡ ಕುಟುಂಬದಿಂದ ಬಂದವನು, ಜೀವನ ನಿರ್ವಹಣೆ ಹೇಗಿರುತ್ತದೆ ಎಂಬುದು ಗೊತ್ತಿದೆ: ಪ್ರಧಾನಿ ಮೋದಿ

ಬೆಂಗಳೂರು: ದೇಶದ ಅಭಿವೃದ್ಧಿಯ ಹಾದಿಯಲ್ಲಿ ಜನರ ಕನಸು ನನಸಾಗಿಸುವುದೇ ನನ್ನ ಸಂಕಲ್ಪವಾಗಿದೆ. 2014 ಹಾಗೂ 2019ರಲ್ಲಿ ದಾಖಲೆ ಪ್ರಮಾಣದಲ್ಲಿ ಬಿಜೆಪಿ ಸ್ಥಾನಗಳನ್ನು ಗೆಲ್ಲಿಸಿ ಬಲಿಷ್ಠ ಸರಕಾರ ರಚನೆ ಮಾಡಿದ್ದೀರಾ. ಈ ಸರಕಾರ ದೇಶವನ್ನು ಬಲಿಷ್ಠ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶನಿವಾರ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಹೂಡಿಕೆ, ರಫ್ತು ಹಾಗೂ ಉತ್ಪಾದನೆ ಆಗುತ್ತಿದೆ. ವಿಶ್ವದಲ್ಲೆ 11ನೆ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಇವತ್ತು ಅಗ್ರ 5ನೆ ಸ್ಥಾನದಲ್ಲಿದೆ. ಈ ಬದಲಾವಣೆ ಕೇವಲ 10 ವರ್ಷಗಳಲ್ಲಿ ಆಗಿದೆ. ಈ ಪರಿವರ್ತನೆಗೆ ಮೂಲ ಕಾರಣ ನಿಮ್ಮ ಒಂದು ಮತ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟವು ಹಳೆಯ ಟೇಪ್ ರೆಕಾರ್ಡರ್ ಹಿಡಿದುಕೊಂಡು ತಿರುಗುತ್ತಿದೆ. ಮೋದಿ ಹಾಗೂ ಆತನ ಸಂಗಡಿಗರು ಟ್ರ್ಯಾಕ್ ರೆಕಾರ್ಡ್ ಹಿಡಿದುಕೊಂಡು ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದು ಅವರು ಟೀಕಿಸಿದರು.

ನಾನು ಸಾಧಾರಣ ಬಡ ಕುಟುಂಬದಿಂದ ಬಂದವನು. ಜೀವನ ನಿರ್ವಹಣೆ ಹೇಗಿರುತ್ತದೆ ಎಂಬುದು ಗೊತ್ತಿದೆ. ನಗರೀಕರಣ ಆಗುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆಯಲ್ಲಿ ಬದಲಾವಣೆ ಆಗಬೇಕು. 10 ವರ್ಷಗಳಲ್ಲಿ ಬಡವರಿಗೆ 1 ಕೋಟಿ ಮನೆಗಳನ್ನು ನೀಡಿದ್ದೇವೆ. ಇದರಲ್ಲಿ 84 ಸಾವಿರ ಮನೆಗಳು ಬೆಂಗಳೂರಿಗೆ ಸಿಕ್ಕಿದೆ ಎಂದು ಅವರು ಹೇಳಿದರು.

ಮಧ್ಯಮ ವರ್ಗದವರ ಮನೆಯ ಕನಸು ನನಸು ಮಾಡಲು ಬಡ್ಡಿಯಲ್ಲಿ ಸಬ್ಸಿಡಿ ನೀಡಲಾಗಿದೆ. ಇದರಿಂದಾಗಿ, ಮಧ್ಯಮ ವರ್ಗದವರ 60 ಸಾವಿರ ಕೋಟಿ ರೂ. ಉಳಿತಾಯ ಮಾಡಿದ್ದೇವೆ. ಗುತ್ತಿಗೆದಾರರು ಮನೆಗಳ ನಿರ್ಮಾಣ ಕಾರ್ಯವನ್ನು ಮಧ್ಯದಲ್ಲೆ ಬಿಟ್ಟು ಹೋಗಬಾರದು ಎಂದು ಎನ್‍ಡಿಎ ಸರಕಾರ ರೇರಾ ಕಾನೂನು ಮಾಡಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.

2014ರ ಮುಂಚೆ 2 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ, ಈಗ 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. ಜಿಎಸ್ಟಿ ಜಾರಿ ನಂತರ ಪರೋಕ್ಷ ತೆರಿಗೆಗಳು ಕಡಿಮೆಯಾದವು. ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಿಂದಾಗಿ ವಿದ್ಯುತ್ ಶುಲ್ಕ ಶೂನ್ಯವಾಗುವುದಲ್ಲದೆ, ಬಡವರಿಗೆ ಆದಾಯವು ಬರಲಿದೆ ಎಂದು ಅವರು ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ವರೆಗಿನ ಉಚಿತ ಆರೋಗ್ಯ ಸೇವೆ ಸಿಗಲಿದೆ. ಈಗ ಈ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಸೇರಿಸಲಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳು ಸಿಗುವಂತೆ ಮಾಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

2014ರಲ್ಲಿ ಒಂದು ಜಿಬಿ ಡೇಟಾ 250 ರೂ.ಇತ್ತು. ಈಗ ಒಂದು ಜಿಬಿ ಡೇಟಾ 10 ರೂ.ಆಗಿದೆ. 2014ರಲ್ಲಿ ಇದ್ದ ಡೇಟಾ ಬೆಲೆಯೆ ಇದ್ದಿದ್ದರೆ ಇಂದು ಮೊಬೈಲ್ ಬಿಲ್ 500-700 ರೂ.ಬದಲಾಗಿ 5-7 ಸಾವಿರ ರೂ.ಆಗಿರುತ್ತಿತ್ತು. ಕಡಿಮೆ ಬೆಲೆಗೆ ಡೇಟಾ ಒದಗಿಸುವುದರ ಜೊತೆಗೆ ಡೇಟಾ ರಕ್ಷಣೆಗೆ ಬಲವಾದ ಕಾನೂನು ತಂದಿದ್ದೇವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆಗಳ ಕೆಲಸ ಮಾತ್ರ ನಡೆಯುತ್ತಿದೆ. 2014ಕ್ಕಿಂತ ಮುನ್ನ 17 ಕಿ.ಮೀ.ಇದ್ದ ನಮ್ಮ ಮೆಟ್ರೋ ಮಾರ್ಗ ಈಗ 70 ಕಿ.ಮೀ.ಗಿಂತ ಹೆಚ್ಚಾಗಿದೆ. ಶೀಘ್ರವೆ ಹಳದಿ ಮಾರ್ಗ ಕಾರ್ಯಾರಂಭ ಮಾಡಲಿದೆ. ಉಪ ನಗರ ರೈಲು ಯೋಜನೆ ಪ್ರಗತಿಯಲ್ಲಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಬಗ್ಗೆ ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಆದಷ್ಟು ಶೀಘ್ರ, ಮೇಡ್ ಇನ್ ಇಂಡಿಯಾ ಪ್ರಯಾಣಿಕರ ವಿಮಾನ ಹಾರಾಟ ಮಾಡಲಿದೆ ಎಂದು ಅವರು ತಿಳಿಸಿದರು.

ಮಿಷನ್ ಗ್ರೀನ್ ಹೈಡ್ರೋಜನ್‍ನಿಂದ ಹೂಡಿಕೆಯ ಅವಕಾಶಗಳು ಹೆಚ್ಚಿವೆ. ಡ್ರೋನ್ ನೀತಿಯಿಂದಾಗಿ ಮ್ಯಾಪಿಂಗ್, ಕೃಷಿ, ರಕ್ಷಣೆ, ಔಷಧ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಹೆಚ್ಚಾಗಿದೆ. ಮೆಟ್ರೋ ಕೋಚ್, ರೈಲು ಬೋಗಿಗಳು, ರಕ್ಷಣಾ ಸಾಮಗ್ರಿಗಳು ರಫ್ತು ಆಗುತ್ತಿವೆ. ನಿನ್ನೆ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಫಿಲಿಫಿನ್ಸ್ ತಲುಪಿದೆ. ಕಾಂಗ್ರೆಸ್ ಅವಧಿಯಲ್ಲಿ ಇದನ್ನು ಕಲ್ಪನೆ ಮಾಡಲು ಸಾಧ್ಯವಿರುತ್ತಿರಲ್ಲ ಎಂದು ನರೇಂದ್ರ ಮೋದಿ ಹೇಳಿದರು.

ಎಚ್.ಎ.ಎಲ್ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‍ನವರು ನನ್ನನ್ನು ಅವಮಾನಿಸಲು ಪ್ರಯತ್ನಪಟ್ಟರು. ಆದರೆ, ಇವತ್ತು ಎಚ್.ಎ.ಎಲ್ ದಾಖಲೆಯ ವಹಿವಾಟು ನಡೆಸುತ್ತಿದೆ. ಕರ್ನಾಟಕದಲ್ಲಿ ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆ ಹಾಗೂ ಅಮೆರಿಕ ನಂತರ ಬೋಯಿಂಗ್ ವ್ಯವಸ್ಥೆ ಕರ್ನಾಟಕದಲ್ಲಿ ಇದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಹಾಗೂ INDI ಒಕ್ಕೂಟ ತಂತ್ರಜ್ಞಾನ, ಡಿಜಿಟಲ್ ಇಂಡಿಯಾ, ಆಧಾರ್, ಜನಧನ್ ಖಾತೆ, ಡಿಜಿಟಲ್ ಪಾವತಿ ವ್ಯವಸ್ಥೆ, ಪಡಿತರ ಪಡೆಯಲು ಡಿಜಿಟಲ್ ದೃಢೀಕರಣ, ಕೋವಿನ್ ವೇದಿಕೆ, ಭಾರತದಲ್ಲಿ ಸಿದ್ಧಪಡಿಸಿದ ಕೋವಿಡ್ ಲಸಿಕೆಯನ್ನು ವಿರೋಧಿಸಿದವರು. ನಾನು ದೇಶವನ್ನು ಗ್ರೀನ್ ಎನರ್ಜಿ ಹಬ್, ಫಾರ್ಮ ಹಬ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ವೆಹಿಕಲ್, ಸೆಮಿ ಕಂಡಕ್ಟರ್, ಗ್ಲೋಬಲ್ ಇನ್ನೋವೇಶನ್ ಹಬ್ ಮಾಡುವುದಾಗಿ ಹೇಳಿದರೆ, ಇಂಡಿ ಒಕ್ಕೂಟದವರು ಮೋದಿಯನ್ನು ತೊಲಗಿಸಿ ಎನ್ನುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಮೋದಿ ಗ್ಯಾರಂಟಿ 5ಜಿ ನಂತರ 6ಜಿ, ಎಐ, ಚಂದ್ರಯಾನ ನಂತರ ಗಗನ ಯಾನ. ಆದರೆ, ಕಾಂಗ್ರೆಸ್‍ನವರು ಯುವಕರ ವಿರೋಧಿಗಳು, ಹೂಡಿಕೆ ವಿರೋಧಿಗಳು, ಖಾಸಗಿ ವಲಯದ ವಿರೋಧಿಗಳು, ತೆರಿಗೆದಾರರ ವಿರೋಧಿಗಳು. ಯಡಿಯೂರಪ್ಪ ಸರಕಾರ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ.ಗಳ ನೆರವು ಕಾಂಗ್ರೆಸ್‍ನವರು ನಿಲ್ಲಿಸಿದ್ದಾರೆ. ಆದರೆ, ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ 6 ಸಾವಿರ ರೂ.ಗಳು ಸಿಗುತ್ತಿರುತ್ತವೆ ಎಂದು ಮೋದಿ ಹೇಳಿದರು.

ರಾಗಿ ಸೇರಿದಂತೆ ಸಿರಿಧಾನ್ಯಗಳನ್ನು ವಿಶ್ವದ ಮಾರುಕಟ್ಟೆಗೆ ತಲುಪಿಸಲು ಯೋಜನೆ ರೂಪಿಸಿದ್ದೇವೆ. ನಿಮ್ಮ ಕನಸುಗಳನ್ನು ನನಸು ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಕೈ ಜೋಡಿಸಿವೆ. ‘ನನ್ನ ಪ್ರತಿಕ್ಷಣ ನಿಮಗಾಗಿ, ದೇಶಕ್ಕಾಗಿ, 24/7 ಫಾರ್ 2047’. ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್.ಮಂಜುನಾಥ್, ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್ ಹಾಗೂ ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಅವರನ್ನು ಭಾರಿ ಮತಗಳ ಅಂತರದಿಂದ ಇವರನ್ನು ಗೆಲ್ಲಿಸುವಂತೆ ಅವರು ಕರೆ ನೀಡಿದರು.

ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಬಾಂಬ್ ಸ್ಪೋಟವಾಗುತ್ತಿದೆ. ಭಜನೆ, ಕೀರ್ತನೆಗಳನ್ನು ಕೇಳಿದರೆ ಹಲ್ಲೆ ನಡೆಸಲಾಗುತ್ತಿದೆ. ಇದೆಲ್ಲ ಸಾಮಾನ್ಯ ಘಟನೆಗಳಲ್ಲ. ಬೆಂಗಳೂರು ಹಾಗೂ ಕರ್ನಾಟಕದ ಜನರು ಕಾಂಗ್ರೆಸ್ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ನರೇಂದ್ರ ಮೋದಿ ಹೇಳಿದರು.

ವಾಟರ್ ಮಾಫಿಯಾ ಕೈಗೆ ಬೆಂಗಳೂರು: ಕಾಂಗ್ರೆಸ್ ಸರಕಾರವು ಕೆಲವೆ ಸಮಯದಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ. ಟೆಕ್ ಸಿಟಿಯಿಂದ ಟ್ಯಾಂಕರ್ ಸಿಟಿ ಮಾಡಿ ಬೆಂಗಳೂರನ್ನು ವಾಟರ್ ಮಾಫಿಯಾ ಕೈಗೆ ಕೊಟಿದೆ. ಕೃಷಿ, ಮೂಲಸೌಕರ್ಯ ಎಲ್ಲ ಕಡೆ ಬಜೆಟ್ ಕಡಿಮೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರದ ಗಮನ ಕೇವಲ ಭ್ರಷ್ಟಾಚಾರದ ಮೇಲಿದೆ. ಬೆಂಗಳೂರಿನ ಜನರ ಸಮಸ್ಯೆ ಮೇಲೆ ಇಲ್ಲ ಎಂದು ಪ್ರಧಾನಿ ಟೀಕಿಸಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

ಭಾರತ್ ಮಾತಾಕೀ ಜೈ, ಬೆಂಗಳೂರಿನ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು, ತಾಯಿ ಭುವನೇಶ್ವರಿ, ತಾಯಿ ಅಣ್ಣಮ್ಮ, ದೇವಿ ಬನಶಂಕರಿ, ಶ್ರೀ ದೊಡ್ಡಗಣಪತಿ, ದೊಡ್ಡ ಬಸವಣ್ಣನ ಚರಣಗಳಿಗೆ ನನ್ನ ಪ್ರಣಾಮಗಳು ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಮಾತುಗಳನ್ನು ಆರಂಭಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X