ಸತತ ಎರಡನೇ ದಿನವೂ ಕುಸಿದ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಭೌಗೋಳಿಕ ರಾಜಕೀಯ ಚಲನೆಗಳು, ಜಾಗತಿಕ ಕಚ್ಚಾ ತೈಲ ಬೆಲೆಗಳು, ಡಾಲರ್ ಮತ್ತು ಅಮೆರಿಕ-ಇರಾನ್ ಸಂಘರ್ಷದ ಮಾತುಕತೆಗಳ ಪ್ರಗತಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಸೂಕ್ಷ್ಮವಾಗಿ ಪರಿಣಾಮ ಬೀರುತ್ತವೆ.
ಜನವರಿಯಲ್ಲಿ ಅತ್ಯಧಿಕ ಮಟ್ಟಕ್ಕೆ ಏರಿದ ನಂತ ಚಿನ್ನದ ಮೌಲ್ಯ ಇಳಿಯುತ್ತ ಬಂದಿದೆ. ಫೆಬ್ರವರಿಯಲ್ಲಿ ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಮೌಲ್ಯ ಕುಸಿದಿತ್ತು. ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಸ್ವಲ್ಪ ಮಟ್ಟಿಗೆ ಕುಸಿದು ಹೆಚ್ಚು ಏರಿಳಿತ ಕಾಣದೆ ನಿಂತಿದೆ. ಇದೀಗ ಮೇ ತಿಂಗಳಲ್ಲೂ ಹೆಚ್ಚು ಏರಿಳಿತ ಕಂಡುಬಂದಿಲ್ಲ, ಬಹುತೇಕ ಬೆಲೆ ಸ್ಥಿರವಾಗಿ ನಿಂತಿದೆ. ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಗಳು ಸ್ವಲ್ಪ ಮಟ್ಟಿಗೆ ಇಳಿದಿವೆ. ಆದರೆ ಬೆಳ್ಳಿಯ ಬೆಲೆ ಸ್ವಲ್ಪ ಏರಿಕೆಯಾಗಿದೆ.
ಭೌಗೋಳಿಕ ರಾಜಕೀಯ ಚಲನೆಗಳು, ಜಾಗತಿಕ ಕಚ್ಚಾ ತೈಲ ಬೆಲೆಗಳು, ಡಾಲರ್ ಮತ್ತು ಅಮೆರಿಕ-ಇರಾನ್ ಸಂಘರ್ಷದ ಮಾತುಕತೆಗಳ ಪ್ರಗತಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಸೂಕ್ಷ್ಮವಾಗಿ ಪರಿಣಾಮ ಬೀರುತ್ತವೆ. ಮಂಗಳವಾರ ಅಮೆರಿಕ-ಇರಾನ್ ನಡುವಿನ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆಯಿಂದಾಗಿ ಚಿನ್ನ-ಬೆಳ್ಳಿ ಬೆಲೆಗಳು ಕುಸಿದಿದ್ದವು. ಇದೀಗ ಹೂಡಿಕೆದಾರರು ಅಂತಾರಾಷ್ಟ್ರೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕಾರಣ ಮತ್ತು ಸ್ಪಷ್ಟತೆಯ ಕೊರತೆಯ ಕಾರಣದಿಂದ ಹಣದುಬ್ಬರದ ಭೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ.
ಇಂದು ಮತ್ತೆ ಕುಸಿದ ಚಿನ್ನದ ದರ:
ಮೇ 27ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 60 ರೂ. ಕುಸಿದು ಹತ್ತು ಗ್ರಾಂ ಬೆಲೆ 1,58,290 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 55 ರೂ. ಕಡಿಮೆಯಾಗಿ ಹತ್ತು ಗ್ರಾಂಗೆ 1,45,100 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 45 ರೂ. ಇಳಿದು ಹತ್ತು ಗ್ರಾಂಗೆ 1,18,720 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮೇ 27ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,829 (–60) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,510 (-55) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,872 (–45) ರೂ. ಬೆಲೆಗೆ ಬಂದು ತಲುಪಿದೆ.
ಏರಿದ ಬೆಳ್ಳಿಯ ಮೌಲ್ಯ
ಜನವರಿಯಲ್ಲಿ ಅತ್ಯಧಿಕ ಮಟ್ಟಕ್ಕೆ ಹೋಗಿದ್ದ ಬೆಳ್ಳಿ, ಮಾರ್ಚ್ ಮತ್ತು ಎಪ್ರಿಲ್ ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿತ್ತು. ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿದ ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯ ಆಸುಪಾಸಿನಲ್ಲಿ ಮುಂದುವರಿದಿತ್ತು. ಕಳೆದ ವಾರ ಬೆಳ್ಳಿಯ ದರ ಪ್ರತಿ ಕೆಜಿಗೆ 2,85,000 ರೂ.ಗೆ ಬಂದು ತಲುಪಿತ್ತು. ಕಳೆದ ಶುಕ್ರವಾರ, ಶನಿವಾರ ಮತ್ತು ಸೋಮವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಈ ಮಂಗಳವಾರ ಪ್ರತಿ ಗ್ರಾಂಗೆ 0.10 ರೂ. ನಷ್ಟು ಕುಸಿದು ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,84,900 ರೂ.ಗೆ ಬಂದಿತ್ತು. ಇದೀಗ ಬುಧವಾರ ಪ್ರತಿ ಗ್ರಾಂಗೆ 0.10 ರಷ್ಟು ಏರಿದ ಬೆಳ್ಳಿಯ ಬೆಲೆ ಮತ್ತೆ ಪ್ರತಿ ಕೆಜಿಗೆ 2,85,000 ರೂ.ಗೆ ಬಂದು ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,844 (-60) ರೂ., 22 ಕ್ಯಾರೆಟ್ ಚಿನ್ನದ ದರ 14,525 (-55) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,829 (-60) ರೂ., 22 ಕ್ಯಾರೆಟ್ ಚಿನ್ನದ ದರ 14,510 (-55) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,834 (-60) ರೂ., 22 ಕ್ಯಾರೆಟ್ ಚಿನ್ನದ ದರ 14,515 (-55) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,982 (-87) ರೂ., 22 ಕ್ಯಾರೆಟ್ ಚಿನ್ನದ ದರ 14,650 (-80) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,829 (-60) ರೂ., 22 ಕ್ಯಾರೆಟ್ ಚಿನ್ನದ ದರ 14,510 (-55) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,829 (-60) ರೂ., 22 ಕ್ಯಾರೆಟ್ ಚಿನ್ನದ ದರ 14,510 (-55) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,844 (-60) ರೂ., 22 ಕ್ಯಾರೆಟ್ ಚಿನ್ನದ ದರ 14,525 (-55) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,844 (-60) ರೂ., 22 ಕ್ಯಾರೆಟ್ ಚಿನ್ನದ ದರ 14,525 (-55) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,844 (-60) ರೂ., 22 ಕ್ಯಾರೆಟ್ ಚಿನ್ನದ ದರ 14,525 (-55) ರೂ.






