Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಸರಕಾರಿ ನೌಕರರ ವಿವಿಧ ಸೇವೆಗಳಿಗೆ ‘ಸಕಾಲ'...

ಸರಕಾರಿ ನೌಕರರ ವಿವಿಧ ಸೇವೆಗಳಿಗೆ ‘ಸಕಾಲ' ಕಾಲಮಿತಿ: ಸರಕಾರದಿಂದ ಅಧಿಸೂಚನೆ

ವಾರ್ತಾಭಾರತಿವಾರ್ತಾಭಾರತಿ18 Oct 2026 7:27 PM IST
share
ಸರಕಾರಿ ನೌಕರರ ವಿವಿಧ ಸೇವೆಗಳಿಗೆ ‘ಸಕಾಲ ಕಾಲಮಿತಿ: ಸರಕಾರದಿಂದ ಅಧಿಸೂಚನೆ

ಬೆಂಗಳೂರು : ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಬಂಧಿಸಿದ ಹಲವಾರು ಪ್ರಮುಖ ಸೇವೆಗಳನ್ನು ಈಗ ‘ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011'ರ ವ್ಯಾಪ್ತಿಗೆ ತರಲಾಗಿದೆ. ಆಡಳಿತ ಸುಧಾರಣಾ ಆಯೋಗ-2ರ ಏಳನೇ ವರದಿಯ ಶಿಫಾರಸುಗಳ ಅನುಸಾರ, ಈ ಸೇವೆಗಳನ್ನು ಎಲ್ಲ ಕ್ಷೇತ್ರ ಮಟ್ಟದ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶಿಸಿದೆ.

ಸಂಬಳ ಮತ್ತು ವೇತನಕ್ಕೆ ಸಂಬಂಧಿಸಿದ ಸೇವೆಗಳು: ಸಂಬಳ ವಿತರಣೆ ಹಾಗೂ ವೇತನ ಪ್ರಮಾಣ ಪತ್ರ ನೀಡುವುದು-3 ಕೆಲಸದ ದಿನಗಳು, ಕಾಲಮಿತಿ ವೇತನ ಬಡ್ತಿ ಮಂಜೂರಾತಿ, ವಾರ್ಷಿಕ ಭಡ್ತಿ ಮಂಜೂರಾತಿ, ವರ್ಗಾವಣೆ ಅಥವಾ ನಿಯೋಜನೆ ಮೇರೆಗೆ ಅಂತಿಮ ವೇತನ ಪ್ರಮಾಣಪತ್ರ ನೀಡುವುದು, ಆಧಾರಿತ ರಜೆಯ ವೇತನ ಮಂಜೂರಾತಿ, ವಾಹನ ಮತ್ತು ಗೃಹ ನಿರ್ಮಾಣ ಮುಂಗಡ ಮಂಜೂರಾತಿ ಹಾಗೂ ಅನ್ಯ ಸೇವಾ ನಿಯೋಜನೆಯಲ್ಲಿರುವ ಅಧಿಕಾರಿಗಳಿಗೆ ಷರತ್ತು/ನಿಬಂಧನೆ ನಿಗದಿ-15 ಕೆಲಸದ ದಿನಗಳು.

ಹಿರಿಯ ವೇತನ ಶ್ರೇಣಿ ಮಂಜೂರಾತಿ ಹಾಗೂ ಪ್ರಥಮ ವೇತನ ಪಡೆಯಲು ಅನುಮತಿ-30 ಕೆಲಸದ ದಿನಗಳು (ಪ್ರಥಮ ವೇತನ ಪಡೆಯಲು ಅನುಮತಿಗೆ 7 ಕೆಲಸದ ದಿನಗಳು), ಫಾರ್ಮ್-16 ನೀಡುವುದು-5 ಕೆಲಸದ ದಿನಗಳು, ಬಾಕಿ ವೇತನ ಮಂಜೂರಾತಿ-90 ಕೆಲಸದ ದಿನಗಳು.

ರಜೆ ಮತ್ತು ಪ್ರವಾಸ ಭತ್ತೆ ಸೇವೆಗಳು: ವಿವಿಧ ಬಗೆಯ ರಜೆಗಳ ಮಂಜೂರಾತಿ (ಗಳಿಕೆ, ಪರಿವರ್ತಿತ, ಅರ್ಧ ವೇತನ ಹಾಗೂ ಅಸಾಧಾರಣ ರಜೆ) ಮತ್ತು ಪ್ರಭಾರ ಭತ್ಯೆ ಮಂಜೂರಾತಿ-10 ಕೆಲಸದ ದಿನಗಳು, ಪ್ರವಾಸ ಭತ್ತೆ ಕೋರಿಕೆ ಹಾಗೂ ಮಂಜೂರಾತಿ-30 ಕೆಲಸದ ದಿನಗಳು.

ವೈದ್ಯಕೀಯ ಹಾಗೂ ನಿವೃತ್ತಿ/ಪಿಂಚಣಿ ಸೇವೆಗಳು: ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ-30 ಕೆಲಸದ ದಿನಗಳು, ಪಿಂಚಣಿ ಮತ್ತು ಉಪದಾನಗಳ ಇತ್ಯರ್ಥದ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಕಳುಹಿಸುವುದು-30 ಕೆಲಸದ ದಿನಗಳು, ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಮುಂಗಡ, ಭಾಗಶಃ ಮತ್ತು ಅಂತಿಮ ಹಿಂಪಡೆಯುವಿಕೆ ಮಂಜೂರಾತಿ-30 ಕೆಲಸದ ದಿನಗಳು, ಮರಣ ಪ್ರಕರಣಗಳ ಇತ್ಯರ್ಥ-30 ಕೆಲಸದ ದಿನಗಳು.

ಅನುಮತಿ ಮತ್ತು ಪತ್ರಗಳ ಸೇವೆಗಳು: ಪಾಸ್ ಪೋರ್ಟ್ ಪಡೆಯಲು ನಿರಾಕ್ಷೇಪಣಾ ಪತ್ರ (ಎನ್‍ಒಸಿ) ನೀಡುವುದು-10 ಕೆಲಸದ ದಿನಗಳು, ವಿದೇಶ ಪ್ರವಾಸಕ್ಕೆ ಅನುಮತಿ-15 ಕೆಲಸದ ದಿನಗಳು, ಉನ್ನತ ವ್ಯಾಸಂಗಕ್ಕೆ ಅನುಮತಿ-7 ಕೆಲಸದ ದಿನಗಳು, ಮನೆ, ನಿವೇಶನ ಅಥವಾ ವಾಹನ ಖರೀದಿ/ಮಾರಾಟಕ್ಕೆ ಅನುಮತಿ-30 ಕೆಲಸದ ದಿನಗಳು, ಅರ್ಜಿಗಳನ್ನು ಕೆ.ಜಿ.ಐ.ಡಿ, ಜಿ.ಐ.ಎಸ್, ಜಿ.ಪಿ.ಎಫ್ ಇತ್ಯಾದಿ ಸಮುಚಿತ ಮಾರ್ಗದಲ್ಲಿ ರವಾನಿಸುವುದು-7 ಕೆಲಸದ ದಿನಗಳು.

ಇತರ ಪ್ರಮುಖ ಸಿಬ್ಬಂದಿ ಸೇವೆಗಳು: ಹಬ್ಬದ ಮುಂಗಡ ಮಂಜೂರಾತಿ-7 ಕೆಲಸದ ದಿನಗಳು, ಸೇವಾ ಪುಸ್ತಕ ಕಳುಹಿಸುವುದು ಹಾಗೂ ಸೇವಾ ಪುಸ್ತಕದ ನಕಲು ನೀಡುವುದು-15 ಕೆಲಸದ ದಿನಗಳು, ಪರೀಕ್ಷಾರ್ಥ ಸೇವಾವಧಿ ಘೋಷಣೆ/ವಿಸ್ತರಣೆ, ಸ್ಥಾನಪನ್ನಾವಧಿ ಘೋಷಣೆ, ಕೆಸಿಎಸ್‍ಆರ್ 53(ಎಫ್) ರನ್ವಯ ಪ್ರಮಾಣ ಪತ್ರ, ಜೇಷ್ಠತಾ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರಾತಿ-30 ಕೆಲಸದ ದಿನಗಳು, ಅನುಕಂಪದ ಆಧಾರದ ಮೇಲೆ ನೇಮಕಾತಿ ಮತ್ತು ಅಂಗವಿಕಲ ಭತ್ತೆ ಮಂಜೂರಾತಿ-90 ಕೆಲಸದ ದಿನಗಳು, ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ತೆ ಮಂಜೂರಾತಿ-30 ಕೆಲಸದ ದಿನಗಳು.

ವಿಶೇಷ ಸೂಚನೆಗಳು: ಈಗಾಗಲೇ ಸಕಾಲ ವ್ಯಾಪ್ತಿಯಲ್ಲಿರುವ ಇಲಾಖೆಗಳು ತಮ್ಮ ಪೂರ್ವಾಸ್ತಿತ್ವದಲ್ಲಿದ್ದ ಅಧಿಕಾರಿಗಳ ವ್ಯವಸ್ಥೆಯನ್ನೇ ಮುಂದುವರಿಸಲಿದ್ದು, ಉಳಿದ ಇಲಾಖೆಗಳ ನೋಡಲ್ ಅಧಿಕಾರಿಗಳು ಅಧಿಸೂಚನೆ ಹೊರಬಿದ್ದ 15 ದಿನಗಳ ಒಳಗಾಗಿ ಸಕಾಲ ಮಿಷನ್‍ಗೆ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

ಅಲ್ಲದೆ, ಮೊದಲನೇ ಹಾಗೂ ಎರಡನೇ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸಕ್ಷಮ ಪ್ರಾಧಿಕಾರಗಳಿಗೆ ಏಕರೂಪವಾಗಿ 35 ಕೆಲಸದ ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಸಿಬ್ಬಂದಿ ಸೇವೆಗಳನ್ನು ನಿಯಮಿತ ಸಮಯದಲ್ಲೇ ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags

Karnataka
share
ವಾರ್ತಾಭಾರತಿ
ವಾರ್ತಾಭಾರತಿ
Next Story
X