ಕೆಪಿಎಸ್‍ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು: ರಾಜ್ಯಪಾಲ ಆದೇಶ

ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‍ಸಿ)ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಹೈಕೋರ್ಟ್ ಆ.18ರಂದು ರಿಟ್ ಅರ್ಜಿ ಸಂಖ್ಯೆ: 21376/2026ರಲ್ಲಿ ನೀಡಿರುವ ಆದೇಶದಂತೆ ಹಾಗೂ ರಾಜ್ಯ ಸಚಿವ ಸಂಪುಟವು ಆ.21ರಂದು ನೀಡಿರುವ ನೆರವು ಮತ್ತು ಸಲಹೆಯ ಮೇರೆಗೆ ರಾಜ್ಯಪಾಲರು ಸಂವಿಧಾನದ 317(2)ನೇ ವಿಧಿಯಡಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿದ್ದಾರೆ.
ರಾಷ್ಟ್ರಪತಿ ಮುಂದಿನ ಆದೇಶ ನೀಡುವವರೆಗೆ ಈ ಅಮಾನತು ಜಾರಿಯಲ್ಲಿರಲಿದೆ. ಇದಲ್ಲದೆ, ಮುಂದಿನ ಆದೇಶ ಬರುವವರೆಗೆ ಕೆಪಿಎಸ್‍ಸಿ ಹಿರಿಯ ಸದಸ್ಯರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story




