ಗ್ರೇಟರ್ ಬೆಂಗಳೂರು ಪ್ರಾಧಿಕಾರ : 10 ವಲಯಗಳಿಗೆ ಜಂಟಿ-ಉಪ ಆಯುಕ್ತರ ನೇಮಕ

ಬೆಂಗಳೂರು, ಸೆ.2 : ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ 10 ವಲಯಗಳಿಗೆ ಜಂಟಿ ಹಾಗೂ ಉಪ ಆಯುಕ್ತರನ್ನು ಸ್ಥಳ ನಿಯುಕ್ತಿಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1ರ ಜಂಟಿ ಆಯುಕ್ತರಾಗಿ ರಂಗನಾಥ್ ಕೆ ಹಾಗೂ ವಲಯ-2ರ ಜಂಟಿ ಆಯುಕ್ತರಾಗಿ ರಂಗನಾಥ್ ಕೆ.ಅವರನ್ನು ಪ್ರಭಾರದಲ್ಲಿರಿಸಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ವಲಯ-1ರ ಜಂಟಿ ಆಯುಕ್ತರಾಗಿ ದಾಕ್ಷಾಯಿಣಿ(ಪ್ರಭಾರ) ಹಾಗೂ ವಲಯ-2ರ ಜಂಟಿ ಆಯುಕ್ತರಾಗಿ ದಾಕ್ಷಾಯಿಣಿಯವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1ರ ಜಂಟಿ ಆಯುಕ್ತರಾಗಿ ಆರತಿ ಆನಂದ್, ವಲಯ-2ರ ಜಂಟಿ ಆಯುಕ್ತರಾಗಿ ಸಂಗಪ್ಪ, ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ರ ಜಂಟಿ ಆಯುಕ್ತರಾಗಿ ಮುಹಮ್ಮದ್ ನಯೀಮ್ ಮೋಮಿನ್(ಪ್ರಭಾರ) ಮತ್ತು ವಲಯ-2ರ ಜಂಟಿ ಆಯುಕ್ತರಾಗಿ ಮುಹಮ್ಮದ್ ನಯೀಮ್ ಮೋಮಿನ್, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ-1ರ ಜಂಟಿ ಆಯುಕ್ತರಾಗಿ ಮಧು ಎನ್.ಎನ್., ವಲಯ-2ರ ಜಂಟಿ ಆಯುಕ್ತರಾಗಿ ಸತೀಶ್ ಬಾನು ಅವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಉಪ ಆಯುಕ್ತರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1ರ ಉಪ ಆಯುಕ್ತರಾಗಿ ರಾಜು ಕೆ., ವಲಯ-2ರ ಉಪ ಆಯುಕ್ತರಾಗಿ ರಾಜು ಕೆ.(ಪ್ರಭಾರ), ಬೆಂಗಳೂರು ಪೂರ್ವ ನಗರ ಪಾಲಿಕೆಯ ವಲಯ-1ರ ಉಪ ಆಯುಕ್ತರಾಗಿ ಶಶಿಕುಮಾರ್, ವಲಯ-2ರ ಉಪ ಆಯುಕ್ತರಾಗಿ ಶಶಿಕುಮಾರ್(ಪ್ರಭಾರ), ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1ರ ಉಪ ಆಯುಕ್ತರಾಗಿ ಅಬ್ದುಲ್ ರಾಬ್, ವಲಯ-2ರ ಉಪ ಆಯುಕ್ತರಾಗಿ ಮಂಜುನಾಥಸ್ವಾಮಿ ಎಲ್. ಅವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ರ ಉಪ ಆಯುಕ್ತರಾಗಿ ಮಮತಾ ಬಿ.ಕೆ., ವಲಯ-2ರ ಉಪ ಆಯುಕ್ತರಾಗಿ ಮಂಗಳಗೌರಿ ಎಂ., ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ-1ರ ಉಪ ಆಯುಕ್ತರಾಗಿ ಗಗನ ಕೆ., ವಲಯ-2ರ ಉಪ ಆಯುಕ್ತರಾಗಿ ಡಿ.ಕೆ.ಬಾಬು ಅವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿದೆ.







