ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್, ವಿಧಾನಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಹೈಕಮಾಂಡ್‌ನೊಂದಿಗೆ ನಡೆದ ಸರಣಿ ಸಭೆಗಳ ನಂತರ ನೂತನ ಸಚಿವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ನೂತನ ಸಚಿವರ ಜೊತೆಗೆ ಉಭಯ ಮನೆಗಳ ಮುಖ್ಯಸ್ಥರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.
ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ, ಉಪಸಭಾಧ್ಯಕ್ಷ ಸ್ಥಾನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಹೆಸರು ಅಂತಿಮವಾಗಿದೆ. ಅಲ್ಲದೆ, ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ಸೋಮವಾರ ಸಂಪುಟ ಸೇರುವವರ ಪಟ್ಟಿ ಇಲ್ಲಿದೆ :
ಪಿ. ಎಂ. ನರೇಂದ್ರಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಕೆ. ಎಸ್. ಬಸವನ್ತಪ್ಪ
ಬಿ. ನಾಗೇಂದ್ರ
ಟಿ. ರಘುಮೂರ್ತಿ
ಬಿ. ಝಡ್. ಝಮೀರ್ ಅಹ್ಮದ್ ಖಾನ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗಶೆಟ್ಟಿ
ಮಂಕಾಳ ವೈದ್ಯ
ಡಾ. ಅಜಯ್ ಸಿಂಗ್
ಎನ್. ಚಲುವರಾಯಸ್ವಾಮಿ
ಕೆ. ಎಂ. ಶಿವಲಿಂಗೇಗೌಡ
ಎಚ್. ಸಿ. ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ಬಸವರಾಜ ರಾಯರೆಡ್ಡಿ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ ಸವದಿ






