ಜೆಡಿಎಸ್ ಪಕ್ಷ ಕಟ್ಟಿದ್ದು ನಾನು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ
ಮೈಸೂರು : ಜೆಡಿಎಸ್ ಪಕ್ಷ ಕಟ್ಟಿದ್ದು ನಾನು, ನಾನು ಜೆಡಿಎಸ್ ನಲ್ಲೇ ಇದ್ದೇನೆ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಮಾತನಾಡಿದ ಅವರು, ʼಜೆಡಿಎಸ್ ಪಕ್ಷದಿಂದ ನಾನು ಗೆದ್ದಿದ್ದೇನೆ. ನನ್ನನ್ನು ಸೋಲಿಸಬೇಕು ಎಂದು ಎಲ್ಲರೂ ಒಗ್ಗಟ್ಟಾದರು. ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನನ್ನು ಕೈ ಹಿಡಿದಿದ್ದಾರೆ. ಜೆಡಿಎಸ್ ಟಿಕೆಟ್ ಕೊಡದಿದ್ದರೇ ನೀವು ಹೇಳಿದಂತೆ ಕೇಳುತ್ತನೆ. ನೀವು ಚುನಾವಣೆಗೆ ನಿಲ್ಲು ಎಂದರೆ ನಿಲ್ಲುತ್ತೇನೆ. ಬೇಡ ಎಂದರೆ ನಿಲ್ಲುವುದಿಲ್ಲ. ಕ್ಷೇತ್ರದ ಜನ ಏನು ಹೇಳುತ್ತಾರೋ ಅದಕ್ಕೆ ಸಿದ್ದʼ ಎಂದು ಹೇಳಿದರು.
ʼನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಇದು ಇವತ್ತಿನದ್ದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಜೊತೆ ನಾನು ಇರುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿʼ ಎಂದು ಜಿ.ಟಿ.ದೇವೇಗೌಡರು ಕ್ಷೇತ್ರದ ಜನರನ್ನು ಕೇಳಿಕೊಂಡರು.
ದಿಲ್ಲಿಗೆ 25 ಜನರು ಹೋಗಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಆಗಲೂ ಎಚ್.ಡಿ.ದೇವೇಗೌಡರು ಮಾತನಾಡಿ ಜಿ.ಟಿ.ದೇವೇಗೌಡ ನನ್ನ ಜೊತೆ ಪಕ್ಷ ಕಟ್ಟಿದ್ದಾನೆ. ವಿರೋಧ ಪಕ್ಷದ ಸ್ಥಾನ ಕೊಟ್ಟಿದ್ದರೆ, ವಿಧಾನಸೌದದಲ್ಲಿ ದೊಡ್ಡ ಧನಿಯಾಗಿರುತ್ತಿದ್ದ ಎಂದು ಹೇಳಿದ್ದಾರೆ ಎಂದರು.







