ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದರೂ ಮುಖ್ಯಮಂತ್ರಿ ಸ್ಥಾನ ಕೊಡಲಿ : ಎಚ್.ವಿಶ್ವನಾಥ್

ಬೆಂಗಳೂರು, ಅ.17: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಲ್ಪ ದಿನವಾದರೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ವಿಧಾನಪರಿಷತ್‍ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 136 ಸ್ಥಾನ ಕಾಂಗ್ರೆಸ್‍ಗೆ ಬಂದು ಬಹುಮತದ ಸರಕಾರ ರಚನೆ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಪಾತ್ರ ಬಹಳ ಇದೆ. ಆದ್ದರಿಂದ ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದರೂ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೊಡಬೇಕು ಎಂದರು.
ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಭಂಡತನ. ಸಿದ್ದರಾಮಯ್ಯ ನಾನು ಮುಖ್ಯಮಂತ್ರಿಯಾಗಿ ಇರುತ್ತೇನೆಂದು ಹೇಳಬಾರದು. ರಾಜಕೀಯ ಪಕ್ಷ ಮತ್ತು ಸರಕಾರ ಎಂದರೆ ಎಲ್ಲರೂ ಒಟ್ಟಾಗಿ ಹೋಗಬೇಕು. ರಾಜಕೀಯ ಪಕ್ಷ ಎಂದರೆ ಎಲ್ಲರೂ ಹೊಂದಾಣಿಕೆಯಿಂದ ಹೋಗಬೇಕು ಎಂದು ಎಚ್.ವಿಶ್ವನಾಥ್ ತಿಳಿಸಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಹಿಂದೆ ಇದ್ದರು. ಈಗ ಎರಡೂವರೆ ವರ್ಷ ಇದ್ದಾರೆ. ಹೈಕಮಾಂಡ್ ಡಿ.ಕೆ.ಶಿವಕುಮಾರ್‍ಗೆ ಮುಖ್ಯಮಂತ್ರಿ ಸ್ಥಾನ ಖಂಡಿತ ಕೊಡಬೇಕು. ಸಿದ್ದರಾಮಯ್ಯ ಎಲ್ಲಾ ನಾನೇ, ನಾನೇ ಅಂದರೆ ಹಾಗೆ ಆಗುವುದಿಲ್ಲ ಎಂದು ಎಚ್.ವಿಶ್ವನಾಥ್ ತಿರುಗೇಟು ನೀಡಿದರು.







