Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಹಜ್‌ ಯಾತ್ರೆ-2024 | ಮೀನಾ ಝೋನ್ ನಲ್ಲಿ...

ಹಜ್‌ ಯಾತ್ರೆ-2024 | ಮೀನಾ ಝೋನ್ ನಲ್ಲಿ ಯಾತ್ರಿಗಳ ವಾಸ್ತವ್ಯಕ್ಕೆ ಇನ್ನೂ ಸಿಗದ ಅವಕಾಶ

-ಅಮ್ಜದ್ ಖಾನ್ ಎಂ.-ಅಮ್ಜದ್ ಖಾನ್ ಎಂ.9 May 2024 4:50 PM IST
share
ಹಜ್‌ ಯಾತ್ರೆ-2024 | ಮೀನಾ ಝೋನ್ ನಲ್ಲಿ ಯಾತ್ರಿಗಳ ವಾಸ್ತವ್ಯಕ್ಕೆ ಇನ್ನೂ ಸಿಗದ ಅವಕಾಶ

ಬೆಂಗಳೂರು: ಖಾಸಗಿ ಹಜ್ ಟೂರ್ ಆಪರೇಟರ್‌ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ಯಾತ್ರಿಗಳು ಪ್ರಯಾಣ ಆರಂಭಿಸಲು ದಿನಗಣನೆ ಆರಂಭವಾಗಿದೆ. ಆದರೆ, ಈವರೆಗೆ ಮೀನಾ ಝೋನ್ ನಲ್ಲಿ ಭಾರತೀಯ ಯಾತ್ರಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಸಿಗದೆ ಇರುವುದು ಟೂರ್ ಆಪರೇಟರ್‌ಗಳನ್ನು ಹೈರಾಣಾಗಿಸಿದೆ.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಅಧೀನದಲ್ಲಿ ಬರುವ ಭಾರತೀಯ ಹಜ್ ಸಮಿತಿಯು ಈ ವಿಚಾರದಲ್ಲಿ, ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಭಾರತೀಯ ಹಜ್ ಮಿಷನ್ ಜೊತೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡು, ಯಾತ್ರಿಗಳು ಸುಗಮವಾಗಿ ತಮ್ಮ ಯಾತ್ರೆಗೆ ತೆರಳಲು ಅನುಕೂಲ ಮಾಡಿಕೊಡಬೇಕಿದೆ.

ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಯಾತ್ರೆ ಆರಂಭಕ್ಕೂ ಮುನ್ನ ಯಾತ್ರಿಗಳ ದಾಖಲಾತಿಗಳ ಪರಿಶೀಲನೆ, ಹೊಟೇಲ್‌ಗಳನ್ನು ಕಾಯ್ದಿರಿಸುವುದು, ಅರಫಾ ಹಾಗೂ ಮೀನಾದಲ್ಲಿ ಯಾತ್ರಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದು, ಮುಅಲ್ಲಿಮ್‌ಗಳ ನಿಯುಕ್ತಿ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.

ಮೇ 3ನೇ ವಾರದ ಆರಂಭದಿಂದ ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಯಾತ್ರಿಗಳು ಹಜ್ ಯಾತ್ರೆಗೆ ಪ್ರಯಾಣ ಆರಂಭಿಸಲಿದ್ದಾರೆ. ಆದರೆ, ಸೌದಿ ಅರೇಬಿಯಾ ಸರಕಾರದ ಹೊಸ ನಿಯಮಾವಳಿಗಳ ಪ್ರಕಾರ ಐಬಾನ್ ಖಾತೆಗೆ ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಹಣ ಜಮೆ ಮಾಡುವಂತಿಲ್ಲ.

ಬದಲಾಗಿ, ಭಾರತೀಯ ಹಜ್ ಮಿಷನ್ ಖಾತೆಗೆ ಹಣ ಜಮೆ ಮಾಡಿ, ಅಲ್ಲಿಂದಲೆ ಅವರು ಯಾತ್ರೆ ಸಂದರ್ಭದಲ್ಲಿನ ವೆಚ್ಚಗಳನ್ನು ಭರಿಸಬೇಕಿದೆ. ಐಬಾನ್ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯೂ 24 ಗಂಟೆಯಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ, ಹೊಸ ನಿಯಮಾವಳಿಗಳ ಹಣ ಜಮೆ ಮಾಡುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ ಎಂದು ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ಹಜ್ ಆರ್ಗನೈರ‍್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಫಿ ಅಹ್ಮದ್, ಭಾರತೀಯ ಹಜ್ ಕಮಿಟಿ ಹಾಗೂ ಭಾರತೀಯ ಹಜ್ ಮಿಷನ್ ಅವರ ವಿಳಂಬ ಧೋರಣೆಯಿಂದಾಗಿ ನಮಗೆ ಇನ್ನೂ ಸಮರ್ಪಕವಾಗಿ ಹೊಟೇಲ್‌ಗಳನ್ನು ಬುಕ್ಕಿಂಗ್ ಮಾಡಲು ಆಗಿಲ್ಲ. ಯಾತ್ರೆಗೆ ಹೋಗುವವರಿಗೆ ಲಸಿಕೆಗಳನ್ನು ಹಾಕಬೇಕು. ಈವರೆಗೆ ಆರೋಗ್ಯ ಸಚಿವಾಲಯದಿಂದ ನಮಗೆ ಲಸಿಕೆಗಳನ್ನು ಪೂರೈಸಿಲ್ಲ. ಈ ಸಂಬಂಧ ಭಾರತೀಯ ಹಜ್ ಸಮಿತಿ ಹಾಗೂ ರಾಜ್ಯ ಹಜ್ ಸಮಿತಿಯ ಗಮನಕ್ಕೂ ತಂದಿದ್ದೇವೆ ಎಂದರು.

ನಮ್ಮ ಮೂಲಕ ಹಜ್ ಯಾತ್ರೆಗೆ ತೆರಳುವ ಯಾತ್ರಿಗಳಿಗಾಗಿ ವಿಮಾನಯಾನದ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಮೀನಾದಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಗದಿದ್ದರೆ ಯಾತ್ರಿಗಳನ್ನು ಕರೆದುಕೊಂಡು ಹೋಗಿ ನಾವು ಉಳಿಸುವುದು ಎಲ್ಲಿ? ಒಂದು ವೇಳೆ ಯಾತ್ರಿಗಳು ನಾವು ಬುಕ್ಕಿಂಗ್ ಮಾಡಿದ ದಿನ ಪ್ರಯಾಣ ಮಾಡಲು ಸಾಧ್ಯವಾಗದಿದ್ದರೆ ನಮ್ಮ ಮೇಲೆ ಆರ್ಥಿಕವಾಗಿ ದೊಡ್ಡ ಸಂಕಷ್ಟ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಈ ಬಗ್ಗೆ ತ್ವರಿತವಾಗಿ ಗಮನ ಹರಿಸಬೇಕು. ಸೌದಿ ಅರೇಬಿಯಾ ಸರಕಾರ, ಭಾರತೀಯ ಹಜ್ ಮಿಷನ್ ಜೊತೆ ಚರ್ಚೆ ನಡೆಸಿ, ನಮಗೆ ಅನುಕೂಲ ಮಾಡಿಕೊಡಬೇಕು. ನಮ್ಮ ರಾಜ್ಯದಿಂದಲೇ ಕನಿಷ್ಠ 3 ಸಾವಿರ ಮಂದಿ ಈ ಬಾರಿ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಶಫಿ ಅಹ್ಮದ್ ತಿಳಿಸಿದರು.

ಭಾರತ ಸರಕಾರ ಹಾಗೂ ಭಾರತೀಯ ಹಜ್ ಮಿಷನ್ ನವರು ಈ ವಿಚಾರದಲ್ಲಿ ತುಂಬಾ ಗಂಭೀರವಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಯಾತ್ರಿಗಳ ಹಣ ಭಾರತೀಯ ಹಜ್ ಮಿಷನ್ ಖಾತೆಗೆ ವರ್ಗಾವಣೆ ಮಾಡುವ ವಿಚಾರದಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜೊತೆಗೆ, ಮೀನಾ ಝೋನ್ ನಲ್ಲಿ ವಾಸ್ತವ್ಯಕ್ಕೆ ಅವಕಾಶ ಇನ್ನೂ ಸಿಗದೆ ಇರುವುದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದೆ. ನಿರಂತರವಾಗಿ ಭಾರತೀಯ ಹಜ್ ಸಮಿತಿಯವರ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಅವರು ಸಮಸ್ಯೆ ಬಗೆಹರಿಸಿ, ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೆಕ್ಕಾ ಪ್ರವಾಸದಲ್ಲಿರುವ ರಾಜ್ಯ ಹಜ್ ಆರ್ಗನೈರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಶೌಕಲ್ ಅಲಿ ಸುಲ್ತಾನ್ .'ವಾರ್ತಾಭಾರತಿ'ಗೆ ತಿಳಿಸಿದರು.

share
-ಅಮ್ಜದ್ ಖಾನ್ ಎಂ.
-ಅಮ್ಜದ್ ಖಾನ್ ಎಂ.
Next Story
X