Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ʼಸ್ಟಿಂಗ್ ಆಪರೇಷನ್ʼ ಗದ್ದಲ; ನಾನು...

ʼಸ್ಟಿಂಗ್ ಆಪರೇಷನ್ʼ ಗದ್ದಲ; ನಾನು ವಿಚಾರಣೆಗೆ ಬರಲು ಸಿದ್ಧನಿದ್ದೇನೆ, ಬನ್ನಿ ನನ್ನನ್ನು ಟಚ್ ಮಾಡಿ ನೋಡೋಣ : HDK ಸವಾಲು

ವಾರ್ತಾಭಾರತಿವಾರ್ತಾಭಾರತಿ15 Oct 2026 3:49 PM IST
share
ʼಸ್ಟಿಂಗ್ ಆಪರೇಷನ್ʼ ಗದ್ದಲ;  ನಾನು ವಿಚಾರಣೆಗೆ ಬರಲು ಸಿದ್ಧನಿದ್ದೇನೆ, ಬನ್ನಿ ನನ್ನನ್ನು ಟಚ್ ಮಾಡಿ ನೋಡೋಣ : HDK ಸವಾಲು

ಬೆಂಗಳೂರು : ʼಸ್ಟಿಂಗ್ ಆಪರೇಷನ್ʼ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದು, ಕೇಂದ್ರ ಸಚಿವ ಎಚ್.​ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ಗುರುವಾರ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್.​ಡಿ.ಕುಮಾರಸ್ವಾಮಿ ಅವರು, ʼಸ್ಟಿಂಗ್ ಆಪರೇಷನ್ ಬಗ್ಗೆ ನಾನು ವಿಚಾರಣೆಗೆ ಬರಲು ಸಿದ್ಧನಿದ್ದೇನೆ. ಬನ್ನಿ ನನ್ನನ್ನು ಟಚ್ ಮಾಡಿ ನೋಡೋಣʼ ಎಂದು ವಾಗ್ದಾಳಿ ನಡೆಸಿದ್ದಾರೆ.

ʼವಿಜಯದಶಮಿಯ ಸಮಯ ಯುದ್ಧಕ್ಕೆ ಹೋಗುವ ಸಮಯವಾಗಿದೆ. ಈ ರಾಜ್ಯ ನಡೆಯುತ್ತಿರುವುದು ಸಿಎಂನಿಂದಲೂ ಅಲ್ಲ. ನನ್ನಿಂದನೂ ಅಲ್ಲ. ಯಾವ ಮುಖಂಡರು, ಅಧಿಕಾರಿಗಳಿಂದಲೂ ಅಲ್ಲ. ತೀರ್ಮಾನಿಸುವವನು ಮೇಲಿದ್ದಾನೆʼ ಎಂದು ನುಡಿದಿದ್ದಾರೆ.

ʼಗೃಹ ಸಚಿವರು ಅತ್ಯಂತ ಕಠಿಣವಾದ ಪದ ಬಳಕೆ ಮಾಡಿದ್ದಾರೆ. ಕೆಪಿಎಸ್​ಸಿ ಕರ್ಮಕಾಂಡ. ಅದರಲ್ಲಿ ಇ.ಡಿ.ಯವರು ಬರದೇ ಇದ್ದಿದ್ದರೆ ಎಲ್ಲವನ್ನೂ ಮುಚ್ಚಿಹಾಕುವವರಿದ್ದರು. ಅವರು ಬಂದಿದ್ದರಿಂದ ಎಲ್ಲವೂ ಬಯಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದಾಗ 24 ಮಂದಿ ಎಇಇ ನೇಮಕಾತಿ ಅಕ್ರಮವಾಗಿದ್ದರ ಕುರಿತು ದಾಖಲೆಗಳನ್ನು ಇಟ್ಟಿದ್ದೆ. ಅದರ ಬಗ್ಗೆ ಪ್ರಿಯಾಂಕ್‌ ಖರ್ಗೆಗೆ ಉತ್ತರ ಕೊಡಲು ಆಗಿಲ್ಲ. ಸುಪ್ರೀಂ ಕೋರ್ಟ್​ಗೆ ಹೋಗಿ ಇಲ್ಲಿನ ಎಜಿ ಹಿಡಿದುಕೊಂಡು ಐಪಿಎಸ್ ಅಧಿಕಾರಿ ಮೇಲೆ ತನಿಖೆ ನಡೆಸುತ್ತಿರುವ ಬಗ್ಗೆ ತಿರುಚಿ ಮಾಹಿತಿ ನೀಡಿದ್ದಾರೆ. ಈಗ ಆ ಅಧಿಕಾರಿ ಸಿಎಸ್​ಗೆ ಪತ್ರ ಬರೆದು ನನ್ನ ಮೇಲೆ ಯಾವುದೇ ಆರೋಪ ಇಲ್ಲ ಅಂದಿದ್ದಾರೆʼ ಎಂದು ತಿಳಿಸಿದ್ದಾರೆ.

ʼಸಂಪುಟ ಸಭೆಯಲ್ಲಿ ಸಿಎಂ ಡಿಕೆಶಿ ಚರ್ಚೆ ಮಾಡಿರುವ ಬಗ್ಗೆ ಮಾರನೇ ದಿನ ಮಾಧ್ಯಮದಲ್ಲಿ ಸುದ್ದಿ ಆಗಿದೆ. ಮಾಧ್ಯಮಗಳಿಗೆ ಈ ಸಂದೇಶ ಕೊಟ್ಟವರು ಯಾರು?. ಸಂಪುಟದ ರಹಸ್ಯ ಚರ್ಚೆಯನ್ನು ಮಾಧ್ಯಮದವರಿಗೆ ಕೊಟ್ಟವರು ಯಾರು?. ನೈಸ್ ವಿಚಾರ ಸಾರ್ವಜನಿಕರ ಮುಂದೆ ಹೋಗಬಾರದು ಎಂದು ಸ್ಟಿಂಗ್ ಆಪರೇಷನ್ ಸುದ್ದಿ ಹರಿಬಿಟ್ಟಿದ್ದಾರೆ. ಸಿಎಂ ಅವರು ಖಾಸಗಿ ಹೋಟೆಲ್​ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯನ್ನು ಏನಕ್ಕೆ ಭೇಟಿಯಾದಿರಿ?. ಯಾರನ್ನು ಭೇಟಿಯಾದಿರಿ?. ಅದಕ್ಕೂ ಮುಂಚೆ ಆ ವ್ಯಕ್ತಿಯನ್ನು ಮನೆಗೂ ಕರೆಸಿಕೊಂಡಿದ್ದೀರಿ. ಮನೆಯಲ್ಲಿ ಏನು ಚರ್ಚೆ ಆಯ್ತು?ʼ ಎಂದು ಅವರು ಪ್ರಶ್ನಿಸಿದ್ದಾರೆ.

ಕಮಿಷನರ್​​ ಕಚೇರಿ ಮೆಟ್ಟಿಲು ಮೇಲೆ ಕುಳಿತು HDK ಧರಣಿ

ʼಸ್ಟಿಂಗ್ ಆಪರೇಷನ್ʼ ಪ್ರಕರಣ ಸಂಬಂಧ ತನಿಖೆಗೆ ಆಗ್ರಹಿಸಿ ಬೆಂಗಳೂರು ಪೊಲೀಸ್​​ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​​.ಡಿ.ಕುಮಾರಸ್ವಾಮಿ ಧರಣಿ ನಡೆಸಿದ್ದಾರೆ.

ʼಮಾಜಿ ಸಿಎಂ ವಿರುದ್ಧ ಅಪಪ್ರಚಾರ ಮಾಡಿದ ವ್ಯಕ್ತಿಯನ್ನು ಕಾಪಾಡಿದ್ದು ಏಕೆ? ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದೇವೆ, ಆದರೆ ಅವರೇ ಮೌನವಾಗಿದ್ದಾರೆ. ನಮಗೆ ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲʼ ಎಂದು ಎಚ್‌ಡಿಕೆ ಹೇಳಿದರು.

ʼನಮ್ಮ ಕಾರ್ಯಕರ್ತರು ಹಾಗೂ ನನ್ನನ್ನೂ ವಿಚಾರಣೆಗೆ ಒಳಪಡಿಸುತ್ತಾರೆ ಎಂದರೂ ನಾವು ಸಿದ್ಧ. ಆದರೆ ಮೂಲ ವ್ಯಕ್ತಿಯನ್ನು ಬಂಧಿಸಿ. ನಮ್ಮ ಯಾವ ಕಾರ್ಯಕರ್ತ ಮೇಲೆ ಅನುಮಾನ ಇದೆ ಹೇಳಿ ಕಳುಹಿಸುತ್ತೇವೆ. ಇಲ್ಲ ನಾನೇ ಬೇಕು ಅಂದರೂ ಬರುತ್ತೇನೆʼ ಎಂದು ಆಕ್ರೋಶ ಹೊರಹಾಕಿದರು.

ಕಮಿಷನರ್​​ ಭರವಸೆ :

ʼಪ್ರಕರಣ ಸಂಬಂಧ ನಾವು ಎಲ್ಲ ರೀತಿಯ ತನಿಖೆ ಮಾಡುತ್ತೇವೆʼ ಎಂದು ಪೊಲೀಸ್​​ ಕಮಿಷನರ್​​ ಭರವಸೆ ನೀಡಿದ್ದು, ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಪ್ರತಿಭಟನೆ ಕೈಬಿಟ್ಟರು.

Tags

HD Kumaraswamysting operation
share
ವಾರ್ತಾಭಾರತಿ
ವಾರ್ತಾಭಾರತಿ
Next Story
X