ತಲೆಯ ಮೇಲೆ ರೆಂಬೆ ಬಿದ್ದು ಕಾರ್ಮಿಕ ಮೃತ್ಯು

ಕೆ.ಸಿ.ರವಿ
ಸೋಮವಾರಪೇಟೆ, ಜೂ.23: ತಲೆಯ ಮೇಲೆ ಮರದ ರೆಂಬೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಕಿಬ್ಬೆಟ್ಟ ಗ್ರಾಮದಲ್ಲಿ ವರದಿಯಾಗಿದೆ.
ಕಿಬ್ಬೆಟ್ಟ ಅಯ್ಯಪ್ಪ ಕಾಲನಿ ನಿವಾಸಿ ಚಂದ್ರ ಎಂಬುವರ ಪುತ್ರ ಕೆ.ಸಿ.ರವಿ(23)ಮೃತಪಟ್ಟವರು.
ಗುರುವಾರ ಮಧ್ಯಾಹ್ನ ಗ್ರೀನ್ ಲ್ಯಾಂಡ್ ತೋಟದಲ್ಲಿ ಸಿಲ್ವರ್ ಮರಗಳನ್ನು ಕಡಿಯುವ ಸಂದರ್ಭ ರೆಂಬೆಯೊಂದು ತಲೆ ಮೇಲೆ ಬಿದ್ದು ರವಿ ಗಾಯಗೊಂಡಿದ್ದಾರೆ. ಕೂಡಲೇ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಡಿ ಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story





