Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಅಕ್ರಮ ನಿವೇಶನ ಹಂಚಿಕೆಯ ಕ್ರಯಪತ್ರವನ್ನು...

ಅಕ್ರಮ ನಿವೇಶನ ಹಂಚಿಕೆಯ ಕ್ರಯಪತ್ರವನ್ನು ಸಹಕಾರಿ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ರದ್ದುಪಡಿಸಬಹುದು : ಹೈಕೋರ್ಟ್

ವಾರ್ತಾಭಾರತಿವಾರ್ತಾಭಾರತಿ27 Dec 2025 7:29 PM IST
share
ಅಕ್ರಮ ನಿವೇಶನ ಹಂಚಿಕೆಯ ಕ್ರಯಪತ್ರವನ್ನು ಸಹಕಾರಿ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ರದ್ದುಪಡಿಸಬಹುದು : ಹೈಕೋರ್ಟ್

ಬೆಂಗಳೂರು : ಗೃಹ ನಿರ್ಮಾಣ ಸಹಕಾರ ಸಂಘ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದ್ದ ಸಂದರ್ಭಗಳಲ್ಲಿ ಸಹಕಾರಿ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಅಕ್ರಮ ಹಂಚಿಕೆಯ ಕ್ರಯಪತ್ರ ರದ್ದುಗೊಳಿಸುವ ಅಧಿಕಾರವಿದೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಬೆಂಗಳೂರು ದಕ್ಷಿಣದ ಚನ್ನಸಂದ್ರದಲ್ಲಿರುವ ಬಿಇಎಂಎಲ್‌ ಲೇಔಟ್‌ ವಸತಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ನೂರಾರು ಗೃಹ ನಿರ್ಮಾಣ ಸಹಕಾರಿ ಸಂಘಗಳ ಪ್ರಕರಣಗಳ ಮೇಲೆ ಈ ತೀರ್ಪು ಗಂಭೀರ ಪರಿಣಾಮ ಬೀರಲಿದೆ.

ಮಾರಾಟ ಕ್ರಯಪತ್ರ (ಸೇಲ್‌ ಡೀಡ್‌) ಆದ ನಂತರ ರಿಜಿಸ್ಟ್ರಾರ್‌ಗೆ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲವೆಂದು ಆಕ್ಷೇಪಿಸಿ ನಗರದ ಸುರೇಶ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಸೇಲ್‌ಡೀಡ್ ರದ್ದುಪಡಿಸುವ ಅಧಿಕಾರ ರಿಜಿಸ್ಟ್ರಾರ್‌ಗೆ ಇದೆ:

ನಿವೇಶನ ಹಂಚಿಕೆ ಅಕ್ರಮವೆಂದು ಕಂಡುಬಂದರೆ ರಿಜಿಸ್ಟ್ರಾರ್‌ ಅಂತಹ ಹಂಚಿಕೆಯನ್ನು ರದ್ದುಗೊಳಿಸಬಹುದು ಮತ್ತು ಆನಂತರ ಆ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಸಬ್‌ ರಿಜಿಸ್ಟ್ರಾರ್‌ ಜತೆ ಹಂಚಿಕೊಳ್ಳಬಹುದು. ಆದರೆ, ನಿಯಮಗಳನ್ನು ಪಾಲನೆ ಮಾಡಬೇಕಷ್ಟೇ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಕ್ರಮ ಹಂಚಿಕೆ ರದ್ದತಿಯ ನಂತರ ಅಗತ್ಯವಿರುವ ಮುಂದಿನ ಕ್ರಮ ಜರುಗಿಸಲು ಸಂಬಂಧಪಟ್ಟ ರಿಜಿಸ್ಟ್ರಾರ್‌, ಆಯಾ ಪ್ರದೇಶ ವ್ಯಾಪ್ತಿಯ ಸಬ್‌ ರಿಜಿಸ್ಟ್ರಾರ್‌ಗೆ ಅಗತ್ಯ ಸೂಚನೆಯನ್ನು ಕಳುಹಿಸಬಹುದು. ಹಾಗೆ ಮಾಡುವ ಮೊದಲು, ಅಕ್ರಮ ಹಂಚಿಕೆಯನ್ನು ಯಾರ ಪರವಾಗಿ ಮಾಡಲಾಗಿದೆಯೋ ಅವರ ವಿಚಾರಣೆಯನ್ನು ನಡೆಸಬೇಕಾಗುತ್ತದೆ. ಕರ್ನಾಟಕ ಸಹಕಾರಿ ಸಂಘಗಳ (ಕೆಸಿಎಸ್‌) ಕಾಯ್ದೆಯ ಸೆಕ್ಷನ್‌ 70ರ ಅಡಿಯಲ್ಲಿ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಅವರ ಅಧಿಕಾರ ಅಪರಿಮಿತವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಕೆಸಿಎಸ್‌ ಕಾಯ್ದೆ, ಕೆಸಿಎಸ್‌ ನಿಯಮಗಳು, ಸೊಸೈಟಿಯ ಬೈಲಾಗಳು ಅಥವಾ ಅಂಥದೇ ಉಲ್ಲಂಘನೆಯ ಆರೋಪವಿಲ್ಲದಿದ್ದಾಗ ಸದಸ್ಯರು ಮತ್ತು ಮೂರನೇ ವ್ಯಕ್ತಿಯ ನಡುವಿನ ವಹಿವಾಟು ಸಂಬಂಧ ಸೆಕ್ಷನ್‌ 70ರ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ವ್ಯಾಜ್ಯದ ಹಿನ್ನೆಲೆ:

ಬೆಂಗಳೂರು ದಕ್ಷಿಣದ ಚನ್ನಸಂದ್ರ ಗ್ರಾಮದಲ್ಲಿ 4,026 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ ಸಂಬಂಧಿಸಿದ ವ್ಯಾಜ್ಯ ಇದಾಗಿದೆ. ವಿವಾದಿತ ನಿವೇಶನವನ್ನು ಮೂಲತಃ ಬಿಇಎಂಎಲ್‌ ನೌಕರರ ಸಹಕಾರ ಸಂಘವು ತನ್ನ ಸದಸ್ಯ ಬಿ.ಎಂ. ಯೋಗೇಶ್‌ಗೆ ಹಂಚಿಕೆ ಮಾಡಿತ್ತು. 2013ರ ಜನವರಿ 19ರಂದು ಕ್ರಯಪತ್ರ ನೋಂದಣಿ ಮಾಡಿಸಲಾಗಿತ್ತು. ತಕ್ಷಣವೇ ಆ ನಿವೇಶನವನ್ನು ಸುರೇಶ್ ಮತ್ತು ಭಾಸ್ಕರ್‌ಗೆ ಮಾರಾಟ ಮಾಡಲಾಗಿತ್ತು.

ಭಾಸ್ಕರ್ ಅವರು 2015ರಲ್ಲಿ ತಮ್ಮ ಪಾಲನ್ನು ಬಿಟ್ಟುಕೊಟ್ಟಿದ್ದರಿಂದ ನಿವೇಶನದ ಸಂಪೂರ್ಣ ಮಾಲೀಕತ್ವ ಹೊಂದಿದ ಸುರೇಶ್ ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಆರಂಭಿಸಿದರು. ಆನಂತರ, ಸಹಕಾರ ಸಂಘವು ಹಿರಿತನದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಯೋಗೇಶ್‌ಗೆ ನೀಡಿದ ಮೂಲ ಹಂಚಿಕೆ ಕಾನೂನುಬಾಹಿರವಾಗಿದೆ ಎಂದು ತೀರ್ಮಾನಿಸಿತ್ತು.

ಜತೆಗೆ, ಕ್ರಯಪತ್ರ ರದ್ದುಗೊಳಿಸುವಂತೆ ಮತ್ತು ಶೇ.18ರ ಬಡ್ಡಿಯೊಂದಿಗೆ 62 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕ್ರಯಪತ್ರ ಮಾಡಿಕೊಟ್ಟಿದ್ದ ಹಿಂದಿನ ಸೊಸೈಟಿ ಪದಾಧಿಕಾರಿಗಳಾದ ಜೆ. ಮುನ್ನಾಗಪ್ಪ (ಅಧ್ಯಕ್ಷರು) ಮತ್ತು ಎನ್‌. ರಾಮಕೃಷ್ಣ (ಉಪಾಧ್ಯಕ್ಷ ರು) ಅವರಿಂದ ವಸೂಲಿ ಮಾಡುವಂತೆ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌‌ಗೆ ಸೊಸೈಟಿ ಮನವಿ ಸಲ್ಲಿಸಿತ್ತು. ಆ ಮನವಿಯನ್ನು ಹೆಚ್ಚುವರಿ ರಿಜಿಸ್ಟ್ರಾರ್‌ ತಿರಸ್ಕರಿಸಿದ್ದರು.

ಇದಾದ ಬಳಿಕ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರವು ವಿಷಯವನ್ನು ಹೊಸದಾಗಿ ಪರಿಶೀಲಿಸಿ ತೀರ್ಮಾನಿಸುವಂತೆ ಹೆಚ್ಚುವರಿ ರಿಜಿಸ್ಟ್ರಾರ್‌ಗೆ 2020ರ ಜುಲೈ 9ರಂದು ನಿರ್ದೇಶಿಸಿತ್ತು. ಈ ನಿರ್ದೇಶನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಸುರೇಶ್, ನೋಂದಾಯಿತ ಕ್ರಯಪತ್ರದ ಮೇಲೆ ಹೆಚ್ಚುವರಿ ರಿಜಿಸ್ಟ್ರಾರ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ ಹಾಗೂ ತಾವು ಮತ್ತು ಭಾಸ್ಕರ್‌ ಸೊಸೈಟಿಯ ಸದಸ್ಯರಲ್ಲ. ಆದ್ದರಿಂದ, ನಿವೇಶನದ ಕ್ರಯಪತ್ರ ರದ್ದುಗೊಳಿಸಲಾಗದು ಎಂದು ವಾದಿಸಿದ್ದರು.

ಈ ವಾದವನ್ನೊಪ್ಪದ ಸೊಸೈಟಿಯು, ಆಡಳಿತ ಮಂಡಳಿಯು ಕಾನೂನುಬಾಹಿರವಾಗಿ ವರ್ತಿಸಿರುವುದರಿಂದ ಮತ್ತು ರಿಜಿಸ್ಟ್ರಾರ್‌ಗೆ ಮಧ್ಯಪ್ರವೇಶಿಸುವ ಅಧಿಕಾರವಿರುವುದರಿಂದ ಸಿವಿಲ್‌ ನ್ಯಾಯಾಲಯ ಮಾತ್ರ ಈ ವಿಷಯವನ್ನು ನಿರ್ಧರಿಸಬಹುದು ಎಂದು ವಾದಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X