SSP ಮೂಲಕವೇ ಎಲ್ಲ ಶಿಷ್ಯವೇತನ ಕಾರ್ಯಕ್ರಮ ಅನುಷ್ಠಾನ ಮಾಡಲು ಉನ್ನತ ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು, ಸೆ.21: ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ತರಹದ ವಿದ್ಯಾರ್ಥಿವೇತನ, ಸಹಾಯಧನ, ನಗದು ಪರಸ್ಕಾರಗಳನ್ನು ಸೇರಿ ಎಲ್ಲ ಶಿಷ್ಯವೇತನ ಕಾರ್ಯಕ್ರಮಗಳನ್ನು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್(ಎಸ್‍ಎಸ್‍ಪಿ) ಮೂಲಕವೇ ಪಾವತಿಸಲು ಕ್ರಮ ಕೈಗೊಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯ ಸರಕಾರವು ಪ್ರಸಕ್ತ ಬಜೆಟ್‍ನ ಅನ್ವಯ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಶಿಷ್ಯವೇತನ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಏಕ ಶಿಷ್ಯ ವೇತನ ಕಾರ್ಯಕ್ರಮದಡಿ ನಿರ್ವಹಿಸಲು ಕ್ರಮ ವಹಿಸಲಾಗುತ್ತಿದೆ. ಹಾಗಾಗಿ ಇಲಾಖೆಯಡಿಯಲ್ಲಿ ಬರುವ ಅನುದಾನಿತ, ಅರೆ ಸರಕಾರಿ, ಸ್ವಂತ ನಿಧಿ, ದತ್ತಿ ನಿಧಿಯನ್ನು ಎಸ್‍ಎಸ್‍ಪಿ ಮೂಲಕವೇ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಪಾವತಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
Next Story





