ಸರಕಾರಿ ಜಾಗದಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ವಿಚಾರ|ಗೃಹ ಇಲಾಖೆಯಿಂದ ಸಾಧಕ-ಬಾಧಕ ಪರಿಶೀಲನೆ: ಡಾ.ಜಿ.ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್ (Photo: PTI)
ಬೆಂಗಳೂರು: ಸರಕಾರಿ ಜಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರೆಸ್ಸೆಸ್) ಚಟುವಟಿಕೆ ನಿಷೇಧ ಸಂಬಂಧ ಗೃಹ ಇಲಾಖೆಗೆ ಮನವಿ ಬಂದರೆ ಅದರ ಸಾಧಕ-ಬಾಧಕ ಪರಿಶೀಲನೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆ ನಿಷೇಧ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರ ಎಲ್ಲವೂ ನಿಮಗೆ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಚರ್ಚೆ ಮಾಡಬಹುದು. ಮುಖ್ಯ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜತೆಗೆ, ನಮ್ಮ ಇಲಾಖೆಗೆ ಮನವಿ ಬಂದಾಗ ಅದರ ಸಾಧಕ ಬಾಧಕ ಪರಿಶೀಲನೆ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಆಗಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸಹಜವಾಗಿ ನಾನು ಹೇಳಿದ್ದೆ. ಎಲ್ಲರೂ ಸಿಎಂ ಆಗಬಹುದು. ಹೈಕಮಾಂಡ್ ಯಾರನ್ನು ಮಾಡುತ್ತದೆ, ಅವರಿಗೆ ಜೈ ಅನ್ನುತ್ತೇವೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ಮೊದಲ ಸಾಲಿನಲ್ಲಿದ್ದರು. ನಾವು ಎರಡನೆ ಸಾಲಿನಲ್ಲಿ ಇದ್ದೇವೆ ಅಷ್ಟೇ ಎಂದು ಅವರು ಹೇಳಿದರು.





