ಮುಖ್ಯಮಂತ್ರಿ ಸಲಹೆಗಾರನಾಗಿ ನನಗೆ ತೃಪ್ತಿ ಇದೆ: ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಲಹೆಗಾರನಾಗಿ ನನಗೆ ತೃಪ್ತಿ ಇದೆ. ನಾನು ಸಾಮಾನ್ಯ ಕಾರ್ಯಕರ್ತ. ಯಾವುದೇ ಸ್ಥಾನಮಾನ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ರಾಜಕೀಯ ಗಂಜಿ ಕೇಂದ್ರ ತೆರೆದಿದ್ದಾರೆ ಎನ್ನುವ ಮಾತು ಹಿಂದಕ್ಕೆ ಪಡೆಯಬೇಕು. ಅಲ್ಲದೆ, ಕುಮಾರಸ್ವಾಮಿ ತಮ್ಮ ಕಾಲದಲ್ಲಿ ಕೆಲಸಕ್ಕೆ ಬಾರದವರಿಗೆ ಹುದ್ದೆ ಕೊಟ್ಟಿದ್ದರು. ಬೇಕು ಬೇಕಾದವರಿಗೆಲ್ಲ ಗೂಟದ ಕಾರು ಕೊಟ್ಟಿದ್ದರು. ಕುಮಾರಸ್ವಾಮಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಬೇಕು. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಯ ಸಾಧಿಸಲಿ ಎಂದು ಹಾರೈಸಿದೆ ಎಂದು ಅವರು ತಿಳಿಸಿದರು.
Next Story





